ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಲ್ಲಿ ವಿದ್ಯಾರ್ಥಿ-ಟೀಚರ್ ಸೆಕ್ಸ್ ಸ್ಕ್ಯಾಂಡಲ್ ಹೆಚ್ಚಳ! (Teacher | student sex cases | US | Ashley Blumenshine | attorney)
Bookmark and Share Feedback Print
 
ಅಮೆರಿಕದಲ್ಲಿ ಗುರು-ಶಿಷ್ಯರ ಸಂಬಂಧ ಶಿಕ್ಷಣಕ್ಕಿಂತ ಹೆಚ್ಚಾಗಿ, ಲೈಂಗಿಕ ಚಟುವಟಿಕೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಪ್ರಕರಣ ಅಧಿಕವಾಗುತ್ತಿರುವುದು ಆಘಾತಕಾರಿಯಾಗಿದೆ ಎಂದು ಮಾಧ್ಯಮದ ವರದಿಯೊಂದು ಬಹಿರಂಗಪಡಿಸಿದೆ.

ಇಲಿನಾಯ್ಸ್‌ನ ಅಸ್ಲೈ ಬ್ಲೂಮೆನ್‌ಶೈನ್ (27) ಟೀಚರ್ ತನ್ನ ಕಾರಿನಲ್ಲಿಯೇ 16 ವರ್ಷದ ವಿದ್ಯಾರ್ಥಿ ಜತೆ ರಾಸಲೀಲೆಯಲ್ಲಿ ತೊಡಗಲು ಮುಂದಾಗುತ್ತಿದ್ದ ಸಂದರ್ಭದಲ್ಲಿಯೇ ಪೊಲೀಸರ ಅತಿಥಿಯಾಗಿದ್ದಾಳೆ ಎಂದು ದಿ ಡೈಲಿ ಮೈಲ್ ಆನ್‌ಲೈನ್ ವರದಿ ಮಾಡಿದೆ.

ಇದೀಗ ಪ್ಲೈನ್‌ಫಿಲ್ಡ್ ಉತ್ತರ ಹೈಸ್ಕೂಲ್‌ನ ನೃತ್ಯ ಮತ್ತು ದೈಹಿಕ ಶಿಕ್ಷಣ ಟೀಚರ್ ಅಸ್ಲೈ ಬ್ಲೂಮೆನ್‌ಶೈನ್ ಪೊಲೀಸ್ ಕಸ್ಟಡಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದರೆ ಅವಿವಾಹಿತ ಟೀಚರ್ ಅಮಾಯಕಳು ಎಂಬುದಾಗಿ ಆಕೆಯ ಪರ ಅಟಾರ್ನಿ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾರ್ಥಿಗಳ ಜತೆಗಿನ ಸೆಕ್ಸ್ ಸ್ಕ್ಯಾಂಡಲ್ ಅಸ್ಲೈಯ ಹೊಸ ಪ್ರಕರಣವಾಗಿದೆ. ಇದಕ್ಕೂ ಮುನ್ನ ಟೆಕ್ಸಾಸ್‌ನ ಜೆನ್ನಿಫರ್ ರಿಯೋಜಸ್(27) ಟೀಚರ್ 16 ವರ್ಷದ ವಿದ್ಯಾರ್ಥಿ ಜತೆ ಲೈಂಗಿಕ ಚಟುವಟಿಕೆ ನಡೆಸಿ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಪೊಲೀಸರು ಬಂಧಿಸಿದ್ದರು.

ಅದೇ ರೀತಿ ಟೆನ್ನೆಸ್ಸಿಯ ಸಮಾಜಶಾಸ್ತ್ರ ಟೀಚರ್ ಮೆಗಾನ್ ಬೌಮಾನ್ನ (27) ಎಂಬಾಕೆ ಮೂರು ವಿದ್ಯಾರ್ಥಿಗಳ ಜತೆ ನಗ್ನವಾಗಿ ಫೋಟೋ ತೆಗೆಯಿಸಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಳು.

ಉತ್ತರ ಕಾರ್ಲೋನಿಯಾದ ನೃತ್ಯ ಶಿಕ್ಷಕಿ 40ರ ಹರೆಯದ ಗಿನಾ ವಾಟ್ರಿಂಗ್ ಎಂಬಾಕೆ ಹತ್ತು ವರ್ಷದ ವಿದ್ಯಾರ್ಥಿ ಜತೆ ಸೆಕ್ಸ್ ನಡೆಸಿರುವುದಾಗಿ ಕಳೆದ ವರ್ಷ ಸೆಪ್ಪೆಂಬರ್ ತಿಂಗಳಲ್ಲಿ ತಪ್ಪೊಪ್ಪಿಕೊಂಡಿದ್ದು, ಆಕೆ ಐದು ವರ್ಷ ಕಾಲ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ.

ಕ್ಯಾಲಿಫೋರ್ನಿಯಾದ ಟೀಚರ್ ಕಾರ್ಲೈ ರೋಸೆ ಅಟ್ಟೆಬುರೈ (31) ಕಳೆದ ನವೆಂಬರ್ ತಿಂಗಳಲ್ಲಿ 16 ವರ್ಷದ ವಿದ್ಯಾರ್ಥಿ ಜತೆ ಲೈಂಗಿಕ ಚಟುವಟಿಕೆ ನಡೆಸಿದ್ದ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ