ತೆಹ್ರಾನ್: ಇರಾನ್‌ನಲ್ಲಿ ಹವಮಾನ ವೈಪ್ಯರೀತದಿಂದಾಗಿ ಸಂಭವಿಸಿದ ಭೀಕರ ವಿಮಾನ ಅಫಘಾತದಲ್ಲಿ 72 ಮಂದಿ ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ವಾಯುವ್ಯ ಭಾಗದ ಪ್ರಧಾನ ಪಟ್ಟಣವಾದ ಒರ್ಮಿಯೇ ಎಂಬಲ್ಲಿ ಈ ದುರಂತ ಸಂಭವಿಸಿದೆ ಎಂದು ಜಿನ್ವಾ ಪತ್ರಿಕಾ ಏಜೆನ್ಸಿ ವರದಿ ಮಾಡಿವೆ. ಇರಾನ್ ರಾಜಧಾನಿ ತೆಹ್ರಾನ್‌ನಿಂದ ಒರ್ಮಿಗೆ ಸಂಚರಿಸುತ್ತಿದ್ದ ಇರಾನ್ ಏರ್‌ಜೆಟ್ ಹವಾಮಾನ ವೈಪ್ಯರೀತಿದಿಂದಾಗಿ ದುರಂತಕ್ಕೀಡಾಗಿದೆ.
ಘಟನೆಯಲ್ಲಿ 35 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸಾವಿಗೀಡಾದವರ ಪೈಕಿ 12 ಕ್ರ್ಯೂ ಸಿಬ್ಬಂದಿಗಳೂ ಸೇರಿದ್ದಾರೆ.
ಇರಾನ್‌ನಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ವಿಮಾನ ಅಪಘಾತಗಳೂ ಹೆಚ್ಚುತ್ತಲೇ ಇವೆ. ಸರಕಾರವು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪವು ಕೇಳಿ ಬರುತ್ತಿವೆ. 2009 ಜುಲೈನಲ್ಲಿ ನಡೆದ ವಿಮಾನ ದುರಂತವೊಂದರಲ್ಲಿ ಎಲ್ಲ 168 ಪ್ರಯಾಣಿಕರು ಸಾವಿಗೀಡಾಗ ಭೀಕರ ಘಟನೆ ನಡೆದಿತ್ತು.
ಹಳೆಯ ವಿಮಾನಗಳನ್ನು ಇದೀಗಲೂ ಸಂಚಾರಕ್ಕೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.