ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರ ಹತ್ಯೆ ಪ್ರಕರಣದ ಕುರಿತಂತೆ ಮುಮ್ತಾಜ್ ಖಾದ್ರಿ ಅವರ ಸಂದರ್ಶನವನ್ನು ಪ್ರಸಾರ ಮಾಡಿದ ಪಾಕಿಸ್ತಾನದ ಎರಡು ಚಾನೆಲ್‌ಗಳಿಗೆ ಪಾಕಿಸ್ತಾನ ಮೀಡಿಯಾ ರೆಗ್ಯುಲೇಟರಿ ವಾಚ್‌ಡಾಗ್ 1 ಮಿಲಿಯನ್ ದಂಡವನ್ನು ವಿಧಿಸಿದೆ.
ಧಾರ್ಮಿಕ ನಿಂದನಾ ಕಾಯ್ದೆಯನ್ನು ಟೀಕಿಸಿದ ಹಿನ್ನೆಲೆಯಲ್ಲಿ ಗವರ್ನರ್ ಅವರನ್ನು ಹತ್ಯೆಗೈಯಲಾಗಿದೆ ಎಂಬ ಖಾದ್ರಿ ಸಮರ್ಥನೆಯ ಸಂದರ್ಶನವನ್ನು ಪ್ರಸಾರ ಮಾಡಿದ ಸಾಮಾ ಮತ್ತು ವಾಕ್ತ್ ಟಿವಿ ಚಾನೆಲ್‌ಗಳಿಗೆ ಈ ದಂಡ ವಿಧಿಸಿದೆ.
ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನ ಮಾಡಿದವರಿಗೆ ಹತ್ಯೆಯೇ ಸೂಕ್ತವಾದ ಶಿಕ್ಷೆ ಎಂಬ ಖಾದ್ರಿ ಅವರ ನಗುವಿನ ಹೇಳಿಕೆಯನ್ನು ಪಾಕಿಸ್ತಾನದ ಹಲವು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ್ದವು. ಈ ಸಂದರ್ಭದಲ್ಲಿ ಕೆಲವು ಟಿವಿ ಚಾನೆಲ್‌ಗಳು ಖಾದ್ರಿಯ ಸಂದರ್ಶನವನ್ನು ರೆಕಾರ್ಡ್ ಮಾಡಿಕೊಂಡಿದ್ದವು. ಆದರೆ ಸಾಮಾ ಮತ್ತು ವಾಕ್ತ್ ಚಾನೆಲ್ ಮಾತ್ರ ಅವುಗಳನ್ನು ಪ್ರಸಾರ ಮಾಡಿದ್ದವು. ಆ ನಿಟ್ಟಿನಲ್ಲಿ ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಮಂಡಳಿ ಎರಡೂ ಚಾನೆಲ್‌ಗಳಿಗೆ 1 ಮಿಲಿಯನ್ ಡಾಲರ್ ಭಾರೀ ಮೊತ್ತದ ದಂಡ ವಿಧಿಸಿದೆ.