ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಂಬಿದ್ರೆ ನಂಬಿ...ತಲೆ ಹೊಕ್ಕ 'ಬುಲೆಟ್' ಸೀನಿದಾಗ ಹೊರಕ್ಕೆ! (London | Italian man | sneezes out bullet | Darco Sangermano)
Bookmark and Share Feedback Print
 
ನಂಬಿದ್ರೆ ನಂಬಿ ಬಿಟ್ಟರೆ ಬಿಡಿ...ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಇಟಲಿಯ ವ್ಯಕ್ತಿಯೊಬ್ಬನ ತಲೆಗೆ ಆಕಸ್ಮಿಕವಾಗಿ ಗುಂಡೊಂದು ಹೊಕ್ಕಿತ್ತು. ಆದರೆ ಅಚ್ಚರಿ ಎಂದರೆ ಆತ ಸೀನಿದಾಗ ಆ ಗುಂಡು ಹೊರ ಬಂದಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ.

ತನ್ನ ಗೆಳತಿ ನಾಪ್ಲೆಸ್ ಜತೆ ಹೊಸ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ರೌಡಿಗಳ ಗುಂಡಿನ ಕಾದಾಟದಿಂದ ದಿಕ್ಕುತಪ್ಪಿ ಬಂದ ಗುಂಡೊಂದು 28ರ ಹರೆಯದ ಡಾರ್ಕೋ ಸಾಂಗೆರ್‌ಮಾನೋ ತಲೆಯೊಳಗೆ ಹೊಕ್ಕಿತ್ತು. ಆ ಗುಂಡು ಡಾರ್ಕೋನ ಬಲಬದಿಯಿಂದ ಒಳಹೊಕ್ಕಿತ್ತು. ಅದು ಮೂಗಿನ ನಾಳದ ಸಮೀಪ ಸಿಕ್ಕಿಹಾಕಿಕೊಂಡಿತ್ತು. ಆದರೆ ಇದರಿಂದ ಗಂಭೀರ ಹಾನಿ ಆಗಿರಲಿಲ್ಲವಾಗಿತ್ತು ಎಂದು ವೈದ್ಯರು ವಿವರಿಸಿದ್ದಾರೆ.

ಗುಂಡೇಟಿನಿಂದ ಧಾರಾಕಾರ ರಕ್ತಸ್ರಾವ ಆಗಿದ್ದು, ಕೂಡಲೇ ಆಂಬುಲೆನ್ಸ್‌ನಲ್ಲಿ ಡಾರ್ಕೋನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆತನಿಂದ ವಿವರಣೆ ಪಡೆದು ಸ್ವಲ್ಪ ಹೊತ್ತು ಕಾದಿದ್ದರು. ಆ ಹೊತ್ತಿಗೆ ಆತ ಸೀನಿದಾಗ ಬಲಮೂಗಿನ ನಾಳದಿಂದ ಗುಂಡು ಹೊರಬಿದ್ದಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಸಾಂಗೆರ್‌ಮಾನೋ ಕುಶಲಕರ್ಮಿಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಆತ ತನ್ನ ಊರಿಗೆ ಮರಳಿದ್ದಾನೆ ಎಂದು ವರದಿ ವಿವರಿಸಿದೆ. ಆದರೂ ಡಾರ್ಕೋನ ಕಣ್ಣಿನ ಭಾಗಕ್ಕೆ ಏಟು ಬಿದ್ದಿರುವುದರಿಂದ ಆಪರೇಷನ್ ಮಾಡಿರುವುದಾಗಿ ತಿಳಿಸಿದ್ದಾರೆ. ಆತನ ದೃಷ್ಟಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದಾಗಿಯೂ ವೈದ್ಯರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ