ಸ್ಥಳೀಯ ವ್ಯಕ್ತಿಯೊಬ್ಬ ತನಗೆ ತಾನೇ ಬೆಂಕಿಹಚ್ಚಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ನೈರುತ್ಯ ಸಾಮ್ಟಾ ನಗರದಲ್ಲಿ ನಡೆದಿರುವುದಾಗಿ ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಆಡಳಿತಾರೂಢ ಸರಕಾರವನ್ನು ಉರುಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಲ್ಲಿ ನಿರುದ್ಯೋಗಿ ಯುವಕನೊಬ್ಬ ಕಳೆದ ತಿಂಗಳು ಟುನಿಸಿಯಾದಲ್ಲಿ ತನಗೆ ತಾನೇ ಬೆಂಕಿಹಚ್ಚಿಕೊಳ್ಳುವ ಮೂಲಕ ಆತ್ಮಾಹುತಿಯಾಗಿರುವುದು ರಾಜಧಾನಿಯಲ್ಲಿನ ಮೊದಲ ಪ್ರಕರಣವಾಗಿದೆ.
ಕಳೆದ ತಿಂಗಳು ನಡೆದ ಹಿಂಸಾಚಾರದಲ್ಲಿ ಆ ಪ್ರದೇಶದಾದ್ಯಂತ ಹಲವಾರು ಮಂದಿ ಆತ್ಮಾಹುತಿ ಮಾಡಿಕೊಂಡಿದ್ದರು. ಇದೀಗ ಶುಕ್ರವಾರ 16 ವರ್ಷದ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ನಾಗರಿಕ ರಕ್ಷಣಾ ವಕ್ತಾರ ಕ್ಯಾ.ಯಾಹಿಯಾ ಅಲ್ ಖತಾನಿ ತಿಳಿಸಿದ್ದಾರೆ.
ಆದರೆ ಆ ಬಾಲಕ ಹೆಸರಾಗಲಿ, ಯಾವುದೇ ವಿವರಗಳನ್ನು ನೀಡಿಲ್ಲ. ಆದರೂ ದೇಶದಲ್ಲಿ ಈ ರೀತಿ ಬೆಂಕಿ ಹಚ್ಚಿಕೊಂಡು ಸಾಯುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.