ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುವತಿಯರನ್ನು ಹಿಂಬಾಲಿಸುವುದು ಅಪರಾಧ: ಬಾಂಗ್ಲಾ ಕೋರ್ಟ್ (Bangla court | sexual offence | offense | Stalking | High Court)
Bookmark and Share Feedback Print
 
ಯುವತಿಯರನ್ನು ಹಾಗೂ ಮಹಿಳೆಯರನ್ನು ಹಿಂಬಾಲಿಸುವುದು ಕಾನೂನು ಬಾಹಿರ ಎಂದು ಬಾಂಗ್ಲಾ ಹೈಕೋರ್ಟ್ ಘೋಷಿಸಿದ್ದು, ಆ ನಿಟ್ಟಿನಲ್ಲಿ ಈ ಅಪರಾಧವನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸುವಂತೆ ಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.

ದೇಶದಲ್ಲಿ ಇಂತಹ ಅನಾಗರಿಕ ನಡವಳಿಕೆಯಿಂದಾಗಿ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಷ್ಟೇ ಅಲ್ಲ ಲೈಂಗಿಕ ಕಿರುಕುಳದ ಬಗ್ಗೆ ಕಾನೂನಿನಲ್ಲಿ ಸಮರ್ಕವಾಗಿ ನಿರೂಪಿಸುವಂತೆಯೂ ಕೋರ್ಟ್ ಸರಕಾರಕ್ಕೆ ತಿಳಿಸಿದೆ. ಅಲ್ಲದೇ ವುಮೆನ್ ಅಂಡ್ ಚಿಲ್ಡ್ರನ್ ರೆಪ್ರೆಸ್ಸನ್ ಪ್ರಿವೆನ್ಶನ್ ಆಕ್ಟ್‌ನಲ್ಲಿನ ಸ್ತ್ರೀ ಪೀಡನೆ ಹಾಗೂ ಹಿಂಬಾಲಿಸು ಎಂಬ ಅರ್ಥವನ್ನು ಬದಲಾಯಿಸಿ ಲೈಂಗಿಕ ಅಪರಾಧ ಎಂದು ತಿದ್ದುಪಡಿ ಮಾಡುವಂತೆ ಸೂಚಿಸಿದೆ.

ಈ ಅಪರಾಧದಲ್ಲಿ ಸಿಕ್ಕಿ ಬಿದ್ದಲ್ಲಿ ಸುಮಾರು 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳಾದ ಎಂ. ಇಮ್ಮಾನ್ ಅಲಿ ಮತ್ತು ಶೇಕ್ ಹಸ್ಸನ್ ಆರಿಫ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ರೈಟ್ಸ್ ಗ್ರೂಪ್ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ದೇಶದ ಯಾವುದೇ ಭಾಗದಲ್ಲಿ ಯುವತಿಯರು ಅಥವಾ ಮಹಿಳೆಯರನ್ನು ಹಿಂಬಾಲಿಸುವುದು ಕಂಡುಬಂದಲ್ಲಿ, ಅವರನ್ನು ಕಾಯ್ದೆಯಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದೆ.

ಅಷ್ಟೇ ಅಲ್ಲ ಶೈಕ್ಷಣಿಕ ಸಂಸ್ಥೆ, ಸಾರಿಗೆ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪಾರ್ಕ್ ಸೇರಿದಂತೆ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನಡೆಯದಂತೆ ತಡೆಗಟ್ಟಲು ದೇಶದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಘಟಕ ಅಥವಾ ತಂಡವನ್ನು ರಚಿಸುವಂತೆಯೂ ಕೋರ್ಟ್ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ