ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪತ್ನಿಯ ಸೆಕ್ಸ್ ವಾಂಛೆ: ಪೊಲೀಸರ ಮೊರೆ ಹೊಕ್ಕ ಗಂಡ (sex-crazy wife | Berlin | Germany | International)
Bookmark and Share Feedback Print
 
PR
PR
ಪತ್ನಿಯ ತಣಿಸಲಾಗದ ಲೈಂಗಿಕ ಕ್ರಿಯೆಯ ಒತ್ತಾಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಕೊನೆಗೆ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ಘಟನೆಯೊಂದು ಬರ್ಲಿನ್‌ನಿಂದ ವರದಿಯಾಗಿದೆ.

ಮಂಗಳವಾರ ನೈಋತ್ಯ ಜರ್ಮನಿಯ ಸ್ಥಳೀಯ ಪೊಲೀಸ್ ಸ್ಟೇಷನ್‌ಗೆ ಬಂದ ಮೂಲತಃ ಟರ್ಕಿಯವನಾಗಿರುವ ವ್ಯಕ್ತಿಯು, ಎರಡು ಮಕ್ಕಳ ತಾಯಿಯಾಗಿರುವ ತನ್ನ 18 ವರ್ಷದ ಪತ್ನಿಯ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಕಳೆದ ನಾಲ್ಕು ವರ್ಷಗಳಿಂದ ಸೋಫಾದಲ್ಲಿಯೇ ಮಲಗುತ್ತಿರುವುದಾಗಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಮನೆಯಲ್ಲಿ ಒಳ್ಳೆಯ ವಿಶ್ರಾಂತಿ ಪಡೆದ ಬಳಿಕವೇ ಪ್ರತಿದಿನ ಕಚೇರಿಗೆ ಹೋಗಬಹುದೆಂಬ ವಿಶ್ವಾಸದಿಂದ ಅವನೀಗ, ಕಡೆಗೂ ತನ್ನ ಪತ್ನಿಗೆ ವಿಚ್ಚೇದನ ನೀಡಿ ಕೈತೊಳೆದುಕೊಳ್ಳಲು ನಿರ್ಧರಿಸಿರುವುದಾಗಿ ಪೊಲೀಸಲು ತಿಳಿಸಿದ್ದಾರೆ.

ಸದ್ಯಕ್ಕೆ ಅವನಿಗೆ ಮನೆಯಲ್ಲಿ ವಿಶ್ರಾಂತಿಯೇ ಸಿಗುತ್ತಿಲ್ಲ. ಯಾಕೆಂದರೆ ಅವನು ಮಲಗಿರುವ ಪಡಸಾಲೆಗೂ ಪತ್ನಿ ಪದೇ ಪದೇ ಬಂದು, ದಾಂಪತ್ಯದ ಕರ್ತವ್ಯಗಳನ್ನು ನೆರವೇರಿಸುವಂತೆ ಬಲವಂತ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಪತಿ ಮಹಾಶಯ, ರಾತ್ರಿ ಒಳ್ಳೆಯ ನಿದ್ರೆ ದೊರಕಿಸಲು ಸಹಾಯ ಮಾಡುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ