ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಮಿಲಿಟರಿ ಅಧಿಕಾರಿಗಳಿಂದ ಹೆಡ್ಲಿಗೆ ಹಣಕಾಸು ನೆರವು (Pakistan | Headley | Pak military | ISI | Mumbai massacre)
ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ಮಾಸ್ಟರ್ ಮೈಂಡ್‌ಗಳ ಜತೆ ಪಾಕಿಸ್ತಾನದ ಐಎಸ್ಐ ನಿಕಟ ಸಂಪರ್ಕ ಹೊಂದಿರುವುದಾಗಿ 26/11ರ ದಾಳಿ ಕುರಿತು ತನಿಖೆ ನಡೆಸಿದ ಮಾಧ್ಯಮ ಸಂಘಟನೆಯೊಂದು ತಿಳಿಸಿದೆ.

ಇತ್ತೀಚೆಗಿನ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದದ್ದು ಮುಂಬೈ ಭಯೋತ್ಪಾದನಾ ದಾಳಿ, ಆದರೂ ಅಮೆರಿಕ ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯವನ್ನು ಮುಂದುವರಿಸಿರುವುದಾಗಿ ಹಿರಿಯ ಪತ್ರಕರ್ತ ಸೆಬಾಸ್ಟಿಯನ್ ರೋಟೆಲ್ಲಾ ಅವರು ನೂತನ ತನಿಖಾ ವರದಿಯಲ್ಲಿ ತಿಳಿಸಿರುವುದಾಗಿ ಪ್ರೊಪಬ್ಲಿಕಾ ಹೇಳಿದೆ.

ಮುಂಬೈ ಭಯೋತ್ಪಾದನಾ ದಾಳಿ ನಡೆಸಿದ ಲಷ್ಕರ್ ಇ ತೊಯ್ಬಾದ ಜತೆ ಪಾಕಿಸ್ತಾನ ಸರಕಾರ ನಿಕಟ ಸಂಬಂಧ ಹೊಂದಿದೆ. ಅಷ್ಟೇ ಅಲ್ಲ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಡೇವಿಡ್ ಹೆಡ್ಲಿಗೆ ಹಣಕಾಸಿನ ನೆರವು ನೀಡಿರುವುದಾಗಿಯೂ ನೂತನ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ ಮುಂಬೈ ಭಯೋತ್ಪಾದನಾ ದಾಳಿಯನ್ನು ಪಾಕಿಸ್ತಾನದಲ್ಲೇ ಕುಳಿತು ನಿರ್ದೇಶನ ನೀಡುತ್ತಿದ್ದ ಕಮಾಂಡರ್ ಮೀರ್ ಹಾಗೂ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ಜತೆ ಬಾಂಧವ್ಯ ಹೊಂದಿರುವ ಬಗ್ಗೆ ಪುರಾವೆ ದೊರೆತಿರುವುದಾಗಿ ರೋಟೆಲ್ಲಾ ವಿವರಿಸಿದ್ದಾರೆ.

ಆದರೆ ಮುಂಬೈ ಭಯೋತ್ಪಾದನಾ ದಾಳಿಕೋರರ ಜತೆ ಐಎಸ್ಐ ಯಾವುದೇ ನಿಕಟ ಸಂಬಂಧ ಹೊಂದಿಲ್ಲ ಎಂದು ಪಾಕಿಸ್ತಾನ ಬಲವಾಗಿ ಅಲ್ಲಗಳೆದಿದೆ. ಈ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇದರಲ್ಲಿ ಆರು ಮಂದಿ ಅಮೆರಿಕದ ಪ್ರಜೆಗಳು ಸೇರಿದಂತೆ 26 ವಿದೇಶಿಯರು ಬಲಿಯಾಗಿದ್ದರು.
ಸಂಬಂಧಿತ ಲೇಖನಗಳು