ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ:9 ಮಹಿಳೆಯರ ಮೇಲೆ ರೇಪ್-ಕಾಮುಕನಿಗೆ ಗಲ್ಲುಶಿಕ್ಷೆ (China | rape | Zeng Qiangbao | sentenced to death | sex)
ಸುಮಾರು ಒಂದು ವರ್ಷಗಳ ಕಾಲ ಇಬ್ಬರು ಯುವತಿಯರನ್ನು ಲೈಂಗಿಕ ಜೀತದಾಳನ್ನಾಗಿ ಮಾಡಿಕೊಂಡಿದ್ದಲ್ಲದೆ, ಒಂಬತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನೊಬ್ಬನಿಗೆ ಚೀನಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

40ರ ಹರೆಯದ ಜೆಂಗ್ ಕ್ವಿಯಾಂಗಬೋ ವುಹಾನ್ ಪ್ರದೇಶದಲ್ಲಿನ ಸ್ಟೀಲ್ ಫ್ಯಾಕ್ಟರಿಯ ನೌಕರನಾಗಿದ್ದು, ಅತ್ಯಾಚಾರ, ದರೋಡೆ, ಅಪ್ರಾಪ್ತ ಯುವತಿಯರನ್ನು ಬಲವಂತವಾಗಿ ಕೂಡಿ ಹಾಕಿಟ್ಟುಕೊಂಡಿರುವ ಆರೋಪದಡಿಯಲ್ಲಿ ದೋಷಿ ಎಂದು ಸೆಂಟ್ರಲ್ ಚೀನಾದ ಹುಬೈ ಪ್ರಾಂತ್ಯದ ಕೋರ್ಟ್ ತೀರ್ಪು ನೀಡಿದೆ.

ಇಬ್ಬರು ಅಪ್ರಾಪ್ತ ಯುವತಿಯರನ್ನು ಸುಮಾರು 590 ದಿನಗಳ ಕಾಲ ಕೂಡಿಹಾಕಿ, 317 ದಿನಗಳ ಕಾಲ ಲೈಂಗಿಕ ಚಟುವಟಿಕೆಗೆ ಬಳಸಿಕೊಂಡಿದ್ದ. ನಂತರ ಪೊಲೀಸರು ಇಬ್ಬರು ಯುವತಿಯರನ್ನು ಕಳೆದ ವರ್ಷ ಮೇ 14ರಂದು ರಕ್ಷಿಸಿರುವುದಾಗಿ ಪ್ರಾಸಿಕ್ಯೂಟರ್ ಕೋರ್ಟ್‌ಗೆ ತಿಳಿಸಿರುವುದಾಗಿ ಚೀನಾ ಡೈಲಿ ವರದಿ ಮಾಡಿದೆ. ಅಷ್ಟೇ ಅಲ್ಲ ಈತ 2007ರ ಜುಲೈನಿಂದ 2010ರ ಮೇವರೆಗೆ ಒಂಬತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಪ್ರಾಸಿಕ್ಯೂಟರ್ ವಿವರಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೆಂಗ್ ಕ್ವಿಯಾಂಗಬೋಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಇಂತಹ ಕೃತ್ಯ ಎಸಗಿದ ಈ ವ್ಯಕ್ತಿಗೆ ಮರಣದಂಡನೆಯೇ ಸೂಕ್ತವಾದದ್ದು ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಸಂಬಂಧಿತ ಲೇಖನಗಳು