ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಯಾರದ್ದೋ ಹೆಂಡತಿ-ಸೆಕ್ಸ್‌ಗಾಗಿ ಹಲವರಿಗೆ ಮಾರಾಟ! (sold every few months | Pakistani woman | rape | husband's friend)
ಯಾರದ್ದೋ (ಹೆಂಡತಿ) ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆ ಮಾತಿನಂತೆ, ಗಂಡನ ಸ್ನೇಹಿತನೇ ಆತನ ಹೆಂಡತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ, ಕಿರುಕುಳ ಕೊಟ್ಟು, ನಂತರ ಒಂದು ವರ್ಷದಲ್ಲಿ ಹಲವಾರು ಪುರುಷರಿಗೆ ಮಾರಾಟವಾಗಿ ಕೊನೆಗೂ ತಪ್ಪಿಸಿಕೊಂಡು ಬಂದ ಪಾಕಿಸ್ತಾನಿ ಮಹಿಳೆಯೊಬ್ಬಳ ಅಪರೂಪದ ಪ್ರಕರಣವೊಂದು ವರದಿಯಾಗಿದೆ.

'ಪ್ರತಿ ಕೆಲವು ತಿಂಗಳಲ್ಲಿ ನನ್ನನ್ನು ಹೊಸ, ಹೊಸ ವ್ಯಕ್ತಿಗೆ ಮಾರಾಟ ಮಾಡಲಾಗುತ್ತಿತ್ತು. ಹಾಗಾಗಿ ನಾನು ಎಲ್ಲೆಲ್ಲಿ ಇದ್ದೆ ಎಂಬುದು ನೆನಪಿನಲ್ಲಿ ಉಳಿದಿಲ್ಲ' ಎಂದು 45ರ ಹರೆಯದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಮಹಿಳೆಯನ್ನು ಕರಾಚಿಯಲ್ಲಿನ ಮನೆಯಿಂದ ಅಪಹರಿಸಲಾಗಿತ್ತು. ಅಂತೂ ಪಂಜಾಬ್ ಪ್ರಾಂತ್ಯದ ಬೋವಾನಾ ಟೆಹಸಿಲ್ ಎಂಬ ಪ್ರದೇಶದಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿರುವುದಾಗಿ ವಿವರಿಸಿದ್ದಾಳೆ.

ಪ್ರತಿ ಕೆಲವು ತಿಂಗಳಲ್ಲಿ ತನ್ನನ್ನು ಹೊಸ ವ್ಯಕ್ತಿಗೆ ಮಾರಾಟ ಮಾಡಲಾಗುತ್ತಿತ್ತು. ಒಂದು ವರ್ಷದಲ್ಲಿ ಹೀಗೆ ಹಲವು ಪುರುಷರಿಗೆ ಮಾರಾಟ ಮಾಡಲಾಗಿತ್ತು. ಅವರೆಲ್ಲರೂ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿರುವುದಾಗಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವಿವರಿಸಿದೆ.

ಒಂದು ದಿನ ಪತಿ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ ಗಂಡನ ಸ್ನೇಹಿತ ಸಾದ್ ಮನೆಗೆ ಭೇಟಿ ನೀಡಿದ್ದ. ಬರುವಾಗ ಆತ ಕೆಲವು ಸ್ವೀಟ್ಸ್ ತಂದಿದ್ದ. ಅದನ್ನು ನಾನು ತಿಂದಿದ್ದೆ. ಸ್ವಲ್ಪ ಹೊತ್ತಿನಲ್ಲಿ ತನಗೆ ಜ್ಞಾನತಪ್ಪಿತ್ತು. ಆ ಸಂದರ್ಭದಲ್ಲಿ ಆತ ತನ್ನನ್ನು ಅಪಹರಿಸಿರುವುದಾಗಿ ಆಕೆ ತಿಳಿಸಿರುವುದಾಗಿ ವರದಿಯಾಗಿದೆ.

ಸಾದ್ ಮೊದಲಿಗೆ ಆಕೆಯನ್ನು ಪಂಜಾಬ್ ಪ್ರಾಂತ್ಯದ ಚಿನಿಯೋಟ್ ನಗರಕ್ಕೆ ಕರೆದೊಯ್ದು ಹೆಸರು ಬದಲಾಯಿಸಿದ್ದನಂತೆ. ನಂತರ ಬಲವಂತದಿಂದ ನಿಖನಾಮಾಕ್ಕೆ ಸಹಿ ಹಾಕಿಸಿಕೊಂಡಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದು, ಸಾದ್ ಎರಡು ತಿಂಗಳ ಕಾಲ ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡು ನಂತರ ಆತನ ಸಹೋದರನಿಗೆ 40 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದನಂತೆ.

ಸಾದ್ ಸಹೋದರ ಝಾಹೂರ್ ಕೂಡ ಮದುವೆ ಸರ್ಟಿಫಿಕೇಟ್‌ಗೆ ಸಹಿ ಹಾಕಿಸಿಕೊಂಡಿದ್ದನಂತೆ. ಆತ ಆಕೆಯಿಂದ ಮನೆಗೆಲಸ ಮಾಡಿಸಿಕೊಳ್ಳುತ್ತಿದ್ದ. ಅಲ್ಲದೇ ಪ್ರತಿ ದಿನವೂ ಹೊಡೆಯುತ್ತಿರುವುದಾಗಿ ದುಃಖ ತಪ್ತಳಾಗಿ ತನ್ನ ಕಥೆಯನ್ನು ವಿವರಿಸಿದ್ದಾಳೆ.

ಮೂರು ತಿಂಗಳ ನಂತರ ಝಾಹೂರ್ ಆಕೆಯನ್ನು ಆತನ 20ರ ಹರೆಯದ ಸೋದರಳಿಯ ಅಹ್ಮದ್‌ಗೆ ಮಾರಾಟ ಮಾಡಿದ್ದ. ಆತ ಎರಡು ತಿಂಗಳ ಕಾಲ ಇಟ್ಟುಕೊಂಡು ಅತ್ಯಾಚಾರ ನಡೆಸಿದ್ದನಂತೆ. ಈ ಸಂದರ್ಭಗಳಲ್ಲಿ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಎರಡು ತಿಂಗಳ ನಂತರ ಅಹ್ಮದ್ ಕೂಡ ಆಕೆಯನ್ನು 80 ಸಾವಿರ ರೂಪಾಯಿಗೆ ಇಬ್ಬರಿಗೆ ಮಾರಾಟ ಮಾಡಿದ್ದನಂತೆ. ಅಂತೂ ಅವರಿಬ್ಬರ ಕಣ್ಣು ತಪ್ಪಿಸಿ ಡಿಸೆಂಬರ್ 31ರಂದು ಆಕೆ ಕಿಟಕಿ ಮೂಲಕ ಪರಾರಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಇವನ್ನೂ ಓದಿ