ತನ್ನ ಪತ್ನಿಯನ್ನು ಕೊಂದು ತಲೆ ಕತ್ತರಿಸಿದ್ದ ಪಾಕಿಸ್ತಾನಿ ಮೂಲದ ಅಮೆರಿಕನ್ ಟೆಲಿವಿಷನ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಇಲ್ಲಿನ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಈತನಿಗೆ ಕನಿಷ್ಠ 25 ವರ್ಷಗಳ ಜೈಲುಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ವರದಿಯೊಂದು ತಿಳಿಸಿದೆ.
ಎರಡು ಮಕ್ಕಳ ತಂದೆಯಾಗಿರುವ ಮುಜ್ಜಾಮ್ಮಿಲ್ ಹಸ್ಸನ್ ಎಂಬಾತ ತನ್ನ ಪತ್ನಿ ಆಸಿಯಾ ಹಸ್ಸನ್‌ಳನ್ನು ಹತ್ಯೆಗೈದು, ತಲೆಕತ್ತರಿಸಿರುವುದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದ. ಆ ನಿಟ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಮದುವೆಯಾಗಿ ಒಂಬತ್ತು ವರ್ಷಗಳಾಗಿದ್ದು, ಪತ್ನಿ ವಿವಾಹ ವಿಚ್ಛೇದನ ಕೇಳಿದ ಕಾರಣಕ್ಕೆ ಆಕ್ರೋಶಗೊಂಡು ತಾನು ಈ ಕೃತ್ಯ ಎಸಗಿರುವುದಾಗಿ ಹಸ್ಸನ್ ಬುಫಾಲೋ ಕೋರ್ಟ್ ವಿಚಾರಣೆ ವೇಳೆ ವಿವರಿಸಿದ್ದಾನೆ. 2009 ಫೆಬ್ರುವರಿ 12ರಂದು ಹಸ್ಸನ್ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ.