ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಖುರೇಷಿ ಕೊಕ್‌ಗೆ ಕಾರಣ-ಡೇವಿಸ್ ಬಂಧಮುಕ್ತಿಗೆ ಒತ್ತಡ! (SM Qureshi | Raymond Davis | immunity | Pakistan | US)
ಕೊಲೆ ಆರೋಪ ಎದುರಿಸುತ್ತಿರುವ ಅಮೆರಿಕದ ಅಧಿಕಾರಿ ರೇಮಂಡ್ ಡೇವಿಸ್‌ ಅವರನ್ನು ಬಂಧಿಸದೆ ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಗೆ ಕೊಕ್ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಲಾಹೋರ್‌ನಲ್ಲಿ ರೇಮಂಡ್ ಡೇವಿಸ್ ಅವರು ಇಬ್ಬರು ಪಾಕಿಸ್ತಾನಿಯರನ್ನು ಗುಂಡಿಟ್ಟು ಹತ್ಯೆಗೈದಿರುವ ಆರೋಪ ಎದುರಿಸುತ್ತಿದ್ದು, ಆ ನಿಟ್ಟಿನಲ್ಲಿ ಪಾಕ್ ಡೇವಿಸ್ ಅವರನ್ನು ಬಂಧಿಸಿತ್ತು. ಆದರೆ ಅಮೆರಿಕ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಡೇವಿಸ್ ಅವರನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಒತ್ತಡ ಹೇರಿತ್ತು.

ಏತನ್ಮಧ್ಯೆ, ಡೇವಿಸ್ ಅವರನ್ನು ಬಿಡುಗಡೆಗೊಳಿಸಲು ಖುರೇಷಿ ಒಲವು ತೋರಿದ್ದರು. ಆದರೆ ಈ ಕುರಿತು ಕೆಲವು ದಿನಗಳ ಹಿಂದಷ್ಟೇ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಡೇವಿಸ್ ಬಿಡುಗಡೆ ಸಾಧ್ಯವಿಲ್ಲ, ಸರಕಾರದ ಕ್ರಮಕ್ಕೆ ನೀವು ಬದ್ಧರಾಗಿಬೇಕು ಎಂದು ಜರ್ದಾರಿ ತಿಳಿಸಿರುವುದಾಗಿ ದಿ ನ್ಯೂಸ್ ಡೈಲಿ ವರದಿ ಮಾಡಿದೆ.

ಆದರೆ ಡೇವಿಸ್ ಅವರನ್ನು ಬಂಧನದಲ್ಲಿಡುವ ಕ್ರಮದ ಬಗ್ಗೆ ಖುರೇಷಿ ತೀವ್ರವಾಗಿ ಖಂಡಿಸಿ,ವಾದ ನಡೆಸಿದ್ದರು. ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಡೇವಿಸ್‌ರನ್ನು ಬಂಧನದಲ್ಲಿಡುವ ಕ್ರಮ ಸರಿಯಲ್ಲ ಎಂಬುದು ಅವರ ನಿಲುವು. ಒಂದು ವೇಳೆ ಡೇವಿಸ್ ಅವರನ್ನು ಬಂಧಿಸುವುದಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದರು ಎಂದು ವರದಿ ವಿವರಿಸಿದೆ.

ಏತನ್ಮಧ್ಯೆ, ಡೇವಿಸ್ ಅವರನ್ನು ಬಂಧನದಲ್ಲಿಡುವ ಕ್ರಮದ ಬಗ್ಗೆ ಸಂಪುಟದಲ್ಲಿನ ಇಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ಖುರೇಷಿ ಹೇಳಿದ್ದರು. ಆದರೆ ಮತ್ತೊಬ್ಬ ವ್ಯಕ್ತಿ ಯಾರು ಎಂಬುದನ್ನು ಅವರು ಬಾಯ್ಬಿಟ್ಟಿಲ್ಲ. ಆದರೆ ಪತ್ರಿಕೆಯ ಪ್ರಕಾರ, ಐಎಸ್ಐನ ವರಿಷ್ಠ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಶಾ ಅವರು ವಿರೋಧ ವ್ಯಕ್ತಪಡಿಸಿದ ವ್ಯಕ್ತಿ ಎಂದು ಹೇಳಿದೆ.

ಡೇವಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ರಹಸ್ಯವಾಗಿ ನಡೆದ ಸಭೆಯಲ್ಲಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ, ಕಾನೂನು ಸಚಿವ ಬಾಬಾರ್ ಅವಾನ್ ಮತ್ತು ಆಂತರಿಕ ಸಚಿವ ರೆಹಮಾನ್ ಮಲಿಕ್ ಹಾಜರಿದ್ದರು.
ಇವನ್ನೂ ಓದಿ