ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಕಿಲೀಕ್ಸ್ ಅಸ್ಸಾಂಜ್ ಗಡಿಪಾರು: ಕೋರ್ಟ್ ಆದೇಶ (Julian Assange | WikiLeaks | extradited | UK judge | Swedish warrant)
ಅತ್ಯಾಚಾರದ ಆರೋಪ ಎದುರಿಸುತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್ ಅವರನ್ನು ಸ್ವೀಡನ್‌ಗೆ ಗಡಿಪಾರು ಮಾಡಲು ಆದೇಶ ನೀಡಿರುವುದಾಗಿ ಬ್ರಿಟನ್ ನ್ಯಾಯಾಧೀಶರು ತಿಳಿಸಿದ್ದಾರೆ.

ಸ್ವೀಡನ್‌ನಲ್ಲಿ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಗಡಿಪಾರು ಮಾಡಲು ಸಮರ್ಥನೀಯವಾದ ಆರೋಪವಾಗಿದೆ. ಅಲ್ಲದೇ ಸ್ವೀಡನ್ ಕೂಡ ಕ್ರಮಬದ್ದವಾಗಿಯೇ ಬಂಧನದ ವಾರಂಟ್ ಅನ್ನು ಜಾರಿಗೊಳಿಸಿದೆ ಎಂದು ನ್ಯಾಯಾಧೀಶ ಹಾವರ್ಡ್ ರಿಡ್ಲೆ ತೀರ್ಪು ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿಯೇ ತಪ್ಪು ನಿರ್ಧಾರದಿಂದಾಗಿ ಸ್ವೀಡನ್ ಬಂಧನದ ವಾರಂಟ್ ಅನ್ನು ಜಾರಿಗೊಳಿಸಿದೆ ಎಂಬುದಾಗಿ ನಂಬಲು ಸಾಧ್ಯವಿಲ್ಲ. ಬ್ರಿಟನ್ ಕೋರ್ಟ್ ಗುರುವಾರ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಸ್ಸಾಂಜ್ ವಕೀಲರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಅಮೆರಿಕದ ವಿರುದ್ಧ ಸಮರ ಸಾರಿ ಲಕ್ಷಾಂತರ ದಾಖಲೆಗಳನ್ನು ವಿಕಿಲೀಕ್ಸ್ ಮೂಲಕ ಹೊರಹಾಕುವ ಮೂಲಕ ಜಾಗತಿಕ ಮಟ್ಟದಲ್ಲಿ ಸಂಚನಲ ಮೂಡಿಸಿದ್ದ ಜೂಲಿಯಾನ್ ಅಸ್ಸಾಂಜ್ ವಿರುದ್ಧ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸ್ವೀಡನ್‌ನಲ್ಲಿ ದೂರು ದಾಖಲಿಸಿದ್ದರು.

ತದ ನಂತರ ಅಸ್ಸಾಂಜ್ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದರು. ಕೆಲ ದಿನ ಜೈಲುವಾಸ ಅನುಭವಿಸಿದ್ದ ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಬಳಿಕ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಿದ್ದರು. ಇದೀಗ ಕೋರ್ಟ್ ಅಸಾಂಜ್ ಗಡಿಪಾರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಇವನ್ನೂ ಓದಿ