ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಟೋಕಿಯೋ ಕೋರ್ಟ್ ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ಏಳು ಮಂದಿಯನ್ನು ಹತ್ಯೆಗೈದ ಹಾಗೂ ಹತ್ತು ಜನರನ್ನು ಗಾಯಗೊಳಿಸಿದ ಘಟನೆ ಜಪಾನ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಘಟನೆಗೆ ಸಂಬಂಧಿಸಿದಂತೆ 28ರ ಹರೆಯದ ಟೋಮೋಹಿಕೋ ಕಾಟೋ ಕಳೆದ ವರ್ಷ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ. ಇಂದು ಕಾಟೋಗೆ ಟೋಕಿಯೋ ಜಿಲ್ಲಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಫ್ಯಾಕ್ಟರಿ ಮಾಜಿ ನೌಕರನಾಗಿದ್ದ ಕಾಟೋ ಜನ ಸಮೂಹದ ಮೇಲೆಯೇ ಟ್ರಕ್ ಹರಿಸಿದ್ದ, ನಂತರ ಚೂರಿಯಿಂದ ಜನರನ್ನು ಇರಿದು ಕೊಂದಿದ್ದ. ಈ ಘಟನೆ ಜಪಾನ್‌ನಾದ್ಯಂತ ಆಘಾತಕಾರಿ ಸುದ್ದಿಯಾಗಿತ್ತು.
ಈ ಘಟನೆ ನಡೆದ ಸಂದರ್ಭದಲ್ಲಿ ಕಾಟೋ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಕೊಯೈಡೋ ನ್ಯೂಸ್ ಏಜೆನ್ಸಿ ತಿಳಿಸಿದೆ.