ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ದ್ವಂದ್ವ ನೀತಿ-ಲಷ್ಕರ್‌ಗೆ ಐಎಸ್ಐ ಸಾಥ್: ಅಮೆರಿಕ (Pakistan | Lashkar-e-Taiba | ISI | spy agency | US Congressmen)
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿರುವ ಐಎಸ್ಐ ಭಾರತದ ವಿರುದ್ಧ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದನ್ನು ಮುಂದುವರಿಸಿರುವುದಾಗಿ ಅಮೆರಿಕದ ಹಿರಿಯ ಸಚಿವರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.

ಭಯೋತ್ಪಾದನ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಹಿತಾಸಕ್ತಿಯನ್ನೇ ಪಾಕ್ ಅನಾವಶ್ಯಕವಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಒಂದೆಡೆ ಉಗ್ರರನ್ನು ಮಟ್ಟಹಾಕಲು ಮಿಲಿಟರಿ ಪಡೆಯನ್ನು ನಿಯೋಜಿಸುವ ಪಾಕಿಸ್ತಾನ, ಮತ್ತೊಂದೆಡೆ ಅದೇ ಲಷ್ಕರ್ ಸಂಘಟನೆಯನ್ನು ಭಾರತದ ವಿರುದ್ಧ ಎತ್ತಿಕಟ್ಟುವ ತಂತ್ರವನ್ನು ಐಎಸ್ಐ ಮುಂದುವರಿಸುತ್ತಿದೆ ಎಂದು ಸ್ಟೀವ್ ಚಾಬೋಟ್ ದೂರಿದ್ದಾರೆ.

ಮಧ್ಯಏಷ್ಯಾ ಮತ್ತು ದಕ್ಷಿಣ ಏಷ್ಯಾ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಚಾಬೋಟ್, ಪಾಕಿಸ್ತಾನದ ದ್ವಂದ್ವ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇವನ್ನೂ ಓದಿ