ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ವಿರುದ್ಧ ಕಾರ್ಯಾಚರಣೆ ನಮಗೆ ಗೊತ್ತೆ ಇಲ್ಲ: ಪಾಕ್ (Pakistan | Asif Ali Zardari | Osama bin Laden | United States | killed)
ಪಾಕಿಸ್ತಾನದ ನೆಲದಲ್ಲಿಯೇ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾಪಡೆ ಹತ್ಯೆಗೈದಿರುವ ಘಟನೆ ಕುರಿತಂತೆ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪ್ರತಿಕ್ರಿಯೆ ನೀಡಿದ್ದು, ಲಾಡೆನ್ ವಿರುದ್ಧದ ದಾಳಿಯಲ್ಲಿ ನಾವು ಪಾಕ್ ಜತೆ ಕೈಗೂಡಿಸಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಅಮೆರಿಕ ಪಾಕ್ ಪೂರ್ಣ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದೆ.

ಲಾಡೆನ್ ಹತ್ಯೆ ಕುರಿತಂತೆ ವಾಷಿಂಗ್ಟನ್ ಪೋಸ್ಟ್‌ಗೆ ವಿವರ ನೀಡಿರುವ ಜರ್ದಾರಿ, ನಮ್ಮ ನೆಲದಲ್ಲಿ ನಡೆದ ಕಾರ್ಯಾಚರಣೆ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲವಾಗಿತ್ತು ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್‌ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಅಬೋಟಾಬಾದ್‌ನಲ್ಲಿ ಠಿಕಾಣಿ ಹೂಡಿದ್ದ ಲಾಡೆನ್ ವಿರುದ್ಧ ಅಮೆರಿಕ ನಡೆಸಿದ ದಾಳಿ ಕುರಿತಂತೆ ಪಾಕಿಸ್ತಾನದ ಯಾವ ಅಧಿಕಾರಿಗಳಿಗೂ ಗೊತ್ತೆ ಇರಲಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಇಬ್ಬಗೆ ನೀತಿಯನ್ನು ತೋರ್ಪಡಿಸಿದ್ದಾರೆ.

ಲಾಡೆನ್ ಎಲ್ಲಿಯೇ ಇದ್ದಿರಲಿ ನಾವು ಆತನ ವಿರುದ್ಧದ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದೇವೆ. ಆದರೆ ಇದೀಗ ಆತನ ಹತ್ಯೆಯಾಗಿದೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಜರ್ದಾರಿ ವಾಷಿಂಗ್ಟನ್ ಪೋಸ್ಟ್‌ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಮೇ 1ರ ರಾತ್ರಿ ಅಮೆರಿಕ ಸೇನಾಪಡೆ ಅಬೋಟಾಬಾದ್‌ನಲ್ಲಿ ದಿಢೀರ್ ದಾಳಿ ನಡೆಸಿ ಲಾಡೆನ್‌ನನ್ನು ಹತ್ಯೆಗೈದಿತ್ತು. ಏತನ್ಮಧ್ಯೆ, ಪಾಕಿಸ್ತಾನದ ಯಾವ ಅಧಿಕಾರಿಗಳಿಗೂ ಸುಳಿವು ಇಲ್ಲದೇ ಜನನಿಬಿಡ ಪ್ರದೇಶದಲ್ಲಿ ಲಾಡೆನ್ ಠಿಕಾಣಿ ಹೂಡಲು ಹೇಗೆ ಸಾಧ್ಯವಾಯಿತು ಎಂದು ಅಮೆರಿಕದ ಸಚಿವರು ಪ್ರಶ್ನಿಸಿದ್ದಾರೆ.
ಇವನ್ನೂ ಓದಿ