ಪಾಕ್ ಗುಪ್ತಚರ ಸಂಸ್ಥೆ (ಐಎಸ್‌ಐ) ಹಾಗೂ ಅಮೆರಿಕ ಗುಪ್ತಚರ ಸಂಸ್ಥೆ (ಸಿಐಎ) ನಡುವೆ, ಇದೀಗ ಪರಸ್ಪರ ವಿಶ್ವಾಸವಿದೆ ಎಂದು ಭಾವಿಸಿಲ್ಲವೆಂದು ಪಾಕಿಸ್ತಾನ ಅಧ್ಯಕ್ಷ ಯೂಸುಫ್ ರಾಜಾ ಗಿಲಾನಿ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಗಿಲಾನಿ, ಅಮೆರಿಕದ ಸಿಐಎ ಮತ್ತು ಐಎಸ್‌ಐ ನಡುವೆ ವಿಶ್ವಾಸದ ಕೊರತೆಯಾಗಿದ್ದು, ಪರಸ್ಪರ ಸಹಕಾರ ಅಂತ್ಯಗೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದೊಂದಿಗೆ ಬಾಂಧವ್ಯ ಹಾಳಾಗಿರುವುದು ಪಾಕಿಸ್ತಾನ ದೇಶಿಯ ಉಗ್ರರ ವಿರುದ್ಧ ನಡೆಸದುತ್ತಿರುವ ಹೋರಾಟದ ಮೇಲೂ ದುಷ್ಪರಿಣಾಮ ಉಂಟು ಮಾಡಲಿದೆ, ಪರಸ್ಪರ ವಿಶ್ವಾಸವಿಲ್ಲದಿದ್ದರೆ ಗುಪ್ತಚರ ಮಾಹಿತಿ ವಿನಿಮಯದಲ್ಲೂ ತೊಂದರೆಯುಂಟಾಗುತ್ತದೆ ಎಂದು ಹೇಳಿದರು.
ಯಾವ ಕಾರಣಕ್ಕಾಗಿ ವಿಶ್ವಾಸದ ಕೊರತೆಯುಂಟಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಿಲಾನಿ 'ಇದು ನಮ್ಮಕಡೆಯಿಂದಾಗಿಲ್ಲ ಅವರನ್ನೇ (ಅಮೆರಿಕ) ಕೇಳಿ 'ಎಂದು ಹೇಳಿದರು.
'ಸಂಪ್ರದಾಯದಂತೆ ಐಎಸ್‌ಐ ಸಿಐಎನೊಂದಿಗೆ ಕಾರ್ಯನಿರ್ವಹಿಸುತ್ತಿತ್ತು, ಈಗ ಪರಸ್ಪರ ವಿಶ್ವಾಸವಿಲ್ಲದೇ ಇರುವುದು ಕಂಡುಬರುತ್ತಿದೆ' ಎಂದು ಸಂದರ್ಶನದಲ್ಲಿ ಗಿಲಾನಿ ಹೇಳಿದರು.