ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಂತೆ ಮಾಡಿದ್ರೆ ಭಾರತಕ್ಕೆ ದಾಳಿ: ಐಎಸ್ಐ ಎಚ್ಚರಿಕೆ (Shuja Pasha | ISI | India | Pakistan | US | Laden Death)
ಅಮೆರಿಕವು ಒಸಾಮ ಬಿನ್ ಲಾಡೆನ್ ಹತ್ಯೆಗೆ ಮಾಡಿದಂತೆ, ಭಾರತವೂ ನಮ್ಮ ದೇಶದೊಳಕ್ಕೆ ಬಂದು ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನೇನಾದರೂ ಮಾಡಿದರೆ, ಆ ದೇಶದೊಳಗೆ ಎಲ್ಲೆಲ್ಲಾ ದಾಳಿ ಮಾಡಬೇಕೆಂದು ನಾವು ಈಗಾಗಲೇ ಸ್ಕೆಚ್ ಸಿದ್ಧ ಮಾಡಿದ್ದೇವೆ ಎಂದು ಎಚ್ಚರಿಸಿದ್ದಾರೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ದಳ ಐಎಸ್ಐ ಮುಖ್ಯಸ್ಥ ಶುಜಾ ಪಾಷಾ.

ಭಾರತವೇನಾದರೂ ಅಮೆರಿಕದಂತೆಯೇ ದಾಳಿ ಕೈಗೊಂಡರೆ, ಆ ದೇಶದೊಳಗೆ ಯಾವ ಪಟ್ಟಣಗಳಲ್ಲಿ ಹೇಗೆ ದಾಳಿ ಮಾಡಬೇಕೆಂದು ಈಗಾಗಲೇ ನಾವು ರಿಹರ್ಸಲ್ ಕೂಡ ಮಾಡಿದ್ದೇವೆ ಎಂದು ಪಾಷಾ ಎಚ್ಚರಿಸಿದ್ದಾರೆ.

ಮುಚ್ಚಿದ ಬಾಗಿಲುಗಳ ನಡುವೆ ನಡೆದ ಪಾಕಿಸ್ತಾನದ ಸೆನೆಟ್ ಮತ್ತು ರಾಷ್ಟ್ರೀಯ ಅಸೆಂಬ್ಲಿ ಜಂಟಿ ಅಧಿವೇಶನಕ್ಕೆ ಇನ್-ಕ್ಯಾಮೆರಾ ಮೂಲಕ, ಅಮೆರಿಕದ ಲಾಡೆನ್-ಹತ್ಯಾ ಕಾರ್ಯಾಚರಣೆಗೆ ಸ್ಪಷ್ಟನೆ ನೀಡುತ್ತಿದ್ದ ಪಾಷಾ, ಭಾರತಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲೇ ಹಲವು ವರ್ಷಗಳಿಂದ ಲಾಡೆನ್ ವಾಸವಾಗಿರುವುದನ್ನು ಮತ್ತು ಅಮೆರಿಕ ಪಡೆಗಳು ಅಲ್ಲಿಗೆ ಬಂದಿರುವುದನ್ನು ಪತ್ತೆ ಹಚ್ಚಲು ಐಎಸ್ಐಗೆ ಅಸಾಧ್ಯವಾಗಿರುವುದಕ್ಕಾಗಿ ಪಾಷಾ ಇಡೀ ದೇಶದ ಜನತೆಯ ಮತ್ತು ಜನಪ್ರತಿನಿಧಿಗಳ ಆಕ್ರೋಶಕ್ಕೆ ಸಿಲುಕಿದ್ದರು.

ಭಾರತವು ಕೂಡ ಪಾಕಿಸ್ತಾನದೊಳಕ್ಕೆ ಹೋಗಿ ಅಮೆರಿಕದಂತೆಯೇ ಕಾರ್ಯಾಚರಣೆ ಮಾಡಬಹುದು ಎಂದು ಭಾರತವು ಕಳೆದ ವಾರ ಎಚ್ಚರಿಕೆ ಸಂದೇಶವನ್ನು ನೀಡಿರುವ ಹಿನ್ನೆಲೆಯಲ್ಲಿ ಪಾಷಾ ಅವರು ಪ್ರತಿಕ್ರಿಯಿಸಿ, ಯಾವುದೇ ದಾಳಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಭಾರತದ ಮೇಲೆ ದಾಳಿ ಮಾಡಬೇಕಾದ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ, ನಮ್ಮ ಕಾರ್ಯತಂತ್ರಗಳು ಈಗಾಗಲೇ ಸಿದ್ಧವಾಗಿವೆ ಎಂದು ಪಾಷಾ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಇವನ್ನೂ ಓದಿ