ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ-ತಾಲಿಬಾನ್ ರಹಸ್ಯ ಚರ್ಚೆ: ಅಫ್ಘಾನ್ ಕಿತಾಪತಿ (Afghan govt leaked | US, Taliban secret talks | Mullah Mohammed Omar)
ತಾಲಿಬಾನ್‌ ಉಗ್ರ ಮುಲ್ಲಾ ಮೊಹಮದ್‌ ಓಮರ್‌ನ ಗೂಢಚಾರನನ್ನು ಅಮೆರಿಕದ ಅಧಿಕಾರಿಗಳು ಕನಿಷ್ಠ ಮೂರು ಬಾರಿ ಭೇಟಿಯಾಗಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಅಫ್ಘಾನಿಸ್ತಾನ ಸರಕಾರ ಬಹಿರಂಗಪಡಿಸಿದೆ. ತಾಲಿಬಾನ್‌ ಉಗ್ರರೊಂದಿಗೆ ಅಮೆರಿಕ ಮುಚ್ಚು ಮರೆಯಲ್ಲಿ ಮಾತುಕತೆ ನಡೆಸುವುದನ್ನು ತಡೆಗಟ್ಟಲು ಅಫ್ಘಾನಿಸ್ತಾನ ಉದ್ದೇಶಪೂರ್ವಕವಾಗಿಯೇ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಾಜತಾಂತ್ರಿಕರು ಹಾಗೂ ತಾಲಿಬಾನ್‌ನ ಹಾಲಿ ಹಾಗೂ ಮಾಜಿ ಮುಖಂಡರು, ಅಫ್ಘಾನ್‌ ಸರಕಾರ ಹಾಗೂ ಮಧ್ಯಸ್ತಿಕೆದಾರನ ಬಾಲ್ಯದ ಸ್ನೇಹಿತ ತಯ್ಯಾಬ್‌ ಆಗಾ ಜೊತೆ ಸರಣಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಯೂರೋಪ್‌ನಲ್ಲಿ ಅಡಗಿರುವ ತಯ್ಯಾಬ್‌ ಆಗಾ ಪಾಕಿಸ್ತಾನಕ್ಕೆ ಬರಲು ಹಿಂಜರಿಯುತ್ತಿದ್ದಾನೆ. ತನ್ನ ವಿರುದ್ಧ ಪ್ರಕಾರ ತೆಗೆದುಕೊಳ್ಳುವ ಭಯವೇ ಇದಕ್ಕೆ ಕಾರಣ ಎನ್ನಲಾಗಿದೆ.

ತಲೆಮರೆಸಿಕೊಂಡಿರುವ ತಾಲಿಬಾನ್‌ ಮುಖಂಡ ಆಗಾ ಜೀವಂತವಾಗಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸಲಾಗಿತ್ತು ಎಂಬುದನ್ನು ಹೆಸರು ಹೇಳಲಿಚ್ಛಿಸದ ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಹಾಗೂ ತಾಲಿಬಾನ್‌ ನಡುವೆ ರಹಸ್ಯ ಮಾತುಕತೆ ನಡೆದಿರುವುದಕ್ಕೆ ಅಫ್ಘಾನ್‌ ಅಧ್ಯಕ್ಷ ಹಮೀದ್‌ ಕರ್ಜಾಯಿ ಆತಂಕಗೊಂಡಿದ್ದಾರೆ ಎಂದು ಅಮೆರಿಕ ತಿಳಿಸಿದೆ. ತಾಲಿಬಾನ್‌ನೊಂದಿಗೆ ಕಳೆದ 2010ರಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿತ್ತು. ಇನ್ನೆರಡು ಸುತ್ತಿನ ಮಾತುಕತೆಯನ್ನು ಈ ವರ್ಷ ಜರ್ಮನಿ ಮತ್ತು ಕತಾರ್‌ನಲ್ಲಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಫ್ಘಾನಿಸ್ತಾನ, ಹಮೀದ್ ಕರ್ಜಾಯಿ, ತಾಲಿಬಾನ್, ರಹಸ್ಯ ಮಾತುಕತೆ, ಕನ್ನಡ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ