ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಂಥ ಕಾಲವಪ್ಪಾ...ಕತ್ತೆಯೇ ಮೇಯರ್ ಅಭ್ಯರ್ಥಿಯಂತೆ! (Bulgaria | Donkey | Mayor candidate | Latest News in Kannada)
ಕೆಲಸ ಆಗಬೇಕಾದ್ರೆ ಕತ್ತೆ ಕಾಲನ್ನೂ ಹಿಡಿಯ ಬೇಕು ಎಂಬುದು ನಾಣ್ಣುಡಿ ಆದರೆ ಕತ್ತೆಯನ್ನೇ ಮೇಯರ್‌ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ ವಿಚಿತ್ರ ಘಟನೆ ಬಲ್ಗೇರಿಯಾದಲ್ಲಿ ನಡೆದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ಟೊಬರ್ 23ರಂದು ವರ್ನಾದಲ್ಲಿ ನಡೆಯಲಿರುವ ನ್ಯೂ ಬಲ್ಗೇರಿಯಾ ಪಾರ್ಟಿಯಿಂದ ಸ್ಫರ್ಧಿಸಿರುವ ಕತ್ತೆ ಮಾರ್ಕೋ, ಕಠಿಣ ಪರಿಶ್ರಮದ ವಾಗ್ದಾನ ನೀಡಿದೆ.

ಈಗಿನ ಮೇಯರ್‌ ಕಿರಿಲ್‌ ಯಾರ್ಡನೋವ್‌ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಬೇಸತ್ತ ಸ್ಥಳೀಯ ಜನರು ಕತ್ತೆಯನ್ನೇ ಮೇಯರ್‌ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಮೇಯರ್‌ ಸ್ಥಾನಕ್ಕೆ ಸ್ಫರ್ಧಿಸಿರುವ ಇತರೆ ಅಭ್ಯರ್ಥಿಗಳಂತೆ ಮಾರ್ಕೋ (ಕತ್ತೆ ) ಕದಿಯುವುದಿಲ್ಲ, ಸುಳ್ಳು ಹೇಳುವುದಿಲ್ಲ ಎಂದು ಪ್ರಚಾರ ನಿರ್ದೇಶಕ ಏಂಜಲ್‌ ಡ್ಯಾಂಕೋವ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮೇಲ್‌ ವರದಿ ಮಾಡಿದೆ.

ಅಧಿಕಾರದಲ್ಲಿರುವ ಮೇಯರ್‌ ಯಾರ್ಡನೋವ್‌ ಅವರು ಆಡಳಿತ ಪಕ್ಷದ ಅಭ್ಯರ್ಥಿಯಾಗಿದ್ದು, ತಮ್ಮ ಎದುರಾಳಿ ಮಾರ್ಕೋ (ಕತ್ತೆ )ಯೊಂದಿಗೆ ವೇದಿಕೆ ಹಂಚಿಕೊಂಡರೆ ಘನತೆಗೆ ಕುಂದು ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಲ್ಗೇರಿಯಾ, ಕತ್ತೆಯೇ ಮೇಯರ್ ಅಭ್ಯರ್ಥಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ