ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸಿಬಿಎಸ್ಇ ಪಠ್ಯದಲ್ಲಿ ಲೈಂಗಿಕಕ್ಕೆ ಖೊಕ್‌ : ಅರ್ಜುನ್ ಸಿಂಗ್
webdunia
ಪ್ರೌಢ ಶಿಕ್ಷಣದ ಕೇಂದ್ರೀಯ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್)ಯ ಪಠ್ಯ ಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನು ಸೇರಿಸುವ ಪ್ರಸ್ತಾವನೆಯಿಲ್ಲ ಎಂದು ರಾಜ್ಯ ಸಭೆಗೆ ಸೋಮವಾರ ತಿಳಿಸಲಾಯಿತು.

ಆದಾಗ್ಯೂ, ಸರಕಾರ ಪ್ರೌಢ ಮತ್ತು ಉನ್ನತ ಪ್ರೌಢ ತರಗತಿಗಳಿಗೆ ಹದಿಹರೆಯ ಶಿಕ್ಷಣ ಕಾರ್ಯಕ್ರಮವನ್ನು (ಅಡೊಲೆಸೆನ್ಸ್ ಎಜುಕೇಶನ್ ಪ್ರೊಗ್ರಾಮ್) ಆರಂಭಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್, ತಮ್ಮ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಎಇಪಿಯು ಎಚ್ಆರ್‌ಡಿ ಸಚಿವಾಲಯ ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನಡುವಿನ ಸಹಯೋಗವಾಗಿದೆ. ಇದರ ಉದ್ದೇಶವು ಹದಿಹರೆಯದವರು ಮನಶಾಸ್ತ್ರೀಯ, ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಉತ್ತಮ ಆಯ್ಕೆಗಳನ್ನು ಮಾಡಲು ಸಬಲಗೊಳಿಸುವುದಾಗಿದೆ.

ಎಇಪಿ, ಎಚ್ಐವಿ/ಏಡ್ಸ್ ಮತ್ತು ಡ್ರಗ್ ನಿಂದನೆಯಂತಹ ಪ್ರಮುಖ ಆತಂಕಗಳ ಬಗ್ಗೆ ಕಲಿಯುವವರು ಜಾಗೃತರಾಗುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಹಣದುಬ್ಬರ ಮಿತಗೊಳಿಸಬೇಕು: ಚಿದಂಬರಂ
ಉ.ಪ್ರ - ಮಾಯಾಗೆ ಕಾಂಗ್ರೆಸ್‌ ಬೆಂಬಲ ಸಾಧ್ಯತೆ