ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಉ.ಪ್ರದೇಶ: ಇಂದು ಅಂತಿಮ ಹಂತದ ಮತದಾನ
webdunia
ಉತ್ತರ ಪ್ರದೇಶ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯು ಮಂಗಳವಾರ ಅಂತಿಮ ಹಾಗೂ ಏಳನೇ ಹಂತದ ಮತದಾನವು ಪ್ರಾರಂಭವಾಗಿದೆ. ಇಂದು ನಡೆಯುತ್ತಿರುವ ಈ ಮತದಾನದಲ್ಲಿ ಹಲವಾರು ನಾಯಕರುಗಳ ಭವಿಷ್ಯ ನಿರ್ಣಯವಾಗಲಿದೆ.

ಪೂರ್ವ ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳಿಗೆ ನಡೆಯಲಿರುವ ಇಂದಿನ ಚುನಾವಣೆಯಲ್ಲಿ ಸುಮಾರು 934 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ರಾಮ್ ನರೇಶ್ ಯಾದವ್ ಅವರು, ಫುಲ್ಪುರ್ ಕ್ಷೇತ್ರದಿಂದ, ಸಮಾಜವಾದಿ ಪಕ್ಷದ ಅಂಬಿಕಾರ್ ಚೌಧರಿ ಕೊಪಾಚಿಟ್ ಕ್ಷೇತ್ರದಿಂದ ಹಾಗೂ ಅಯೋಧ್ಯೆಯಿಂದ, ಸಮಾಜವಾದಿ ಪಕ್ಷದ ನಾಯಕ ಬೆನಿ ಪ್ರಸಾದ್ ವರ್ಮಾ ಅವರಂತಹ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ಅಪ್ನಾ ದಳದ ಪವನ್ ಪಾಂಡೆ ಅವರ ಮೇಲೆ ಸುಮಾರು 63 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅಕ್ಬರ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅದೇ ರೀತಿಯಾಗಿ ಮಾಜಿ ಸಚಿವ ಹಾಗೂ ಮಧುಮಿತಾ ಶುಕ್ಲಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಸಮಾಜವಾದಿ ಪಕ್ಷದ ಅಮರಮಣಿ ತ್ರಿಪಾಠಿ ಅವರು ಲಕ್ಷ್ಮಿಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವುದು ಬಹಳ ಮಹತ್ವಕಾರಿ ವಿಷಯ.

ಅಂತಿಮ ಹಂತದ ಈ ಚುನಾವಣೆಗೆ ಮತದಾನ ನಡೆಯುವ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಸುಮಾರು 16,000 ಮತದಾನ ಬೂತ್‌ಗಳಲ್ಲಿ 20 ಕೇಂದ್ರಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಚುನಾವಣಾ ಆಯೋಗ ಘೋಷಿಸಿದೆ.

ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ದೃಷ್ಟಿಕೋನದಿಂದ 650 ಕೇಂದ್ರದ ಅರೆಸೇನಾ ಪಡೆ ಯೋಧರನ್ನು, 25,000 ತಾತ್ಕಾಲಿಕ ಸೇನಾ ಕಾನ್‌ಸ್ಟೇಬಲ್‌ಗಳನ್ನು ಹಾಗೂ 30,000 ಪೊಲೀಸ್‌ರನ್ನು ನೇಮಿಸಲಾಗಿದೆ.
ಮತ್ತಷ್ಟು
ಶಾಂತಿ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು:ಯಾಸಿನ್
ಸಿಬಿಎಸ್ಇ ಪಠ್ಯದಲ್ಲಿ ಲೈಂಗಿಕಕ್ಕೆ ಖೊಕ್‌ : ಅರ್ಜುನ್ ಸಿಂಗ್
ಹಣದುಬ್ಬರ ಮಿತಗೊಳಿಸಬೇಕು: ಚಿದಂಬರಂ
ಉ.ಪ್ರ - ಮಾಯಾಗೆ ಕಾಂಗ್ರೆಸ್‌ ಬೆಂಬಲ ಸಾಧ್ಯತೆ