ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಅಪಹರಣ ಪ್ರಕರಣ: ಶಹಾಬುದ್ದೀನ್‌ಗೆ ಜೀವಾವಧಿ ಶಿಕ್ಷೆ
webdunia
ಕಳೆದ ಎಂಟು ವರ್ಷಗಳ ಹಿಂದೆ ಸಿಪಿಐ ಎಂಎಲ್ ಪಕ್ಷದ ಕಾರ್ಯಕರ್ತರೊಬ್ಬರನ್ನು ಅಪಹರಣ ಮಾಡಿದ ವಿವಾದಾಸ್ಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಾನ್‌ನ ಸಂಸದ, ಆರ್‌ಜೆಡಿಯ ಮೊಹಮ್ಮದ್ ಶಹಾಬುದ್ದೀನ್ ಅವರಿಗೆ ಕೆಳ ಹಂತದ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಲ್ಲದೆ ಶಹಾಬುದ್ದೀನ್‌ಗೆ 10,000 ರೂ.ಗಳ ದಂಡ ವಿಧಿಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾತ್ಸವ್ ಅವರು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಗಡುವು ನೀಡಿದ್ದಾರೆ.

1999 ಫೆಬ್ರುವರಿ 7 ರಂದು ಸಿಪಿಐ ಎಂಎಲ್ ಪಕ್ಷದ ಕಾರ್ಯಕರ್ತ ಚೋಟೆ ಲಾಲ್ ಗುಪ್ತಾ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ದಂಡ ಸಂಹಿತೆ 364 (ಅಪಹರಣ ಅಥವಾ ಕೊಲೆಗಾಗಿ ಅಪಹರಣ ಮಾಡಿಸುವ) ಪ್ರಕಾರ, ಶಹಾಬುದ್ದೀನ್ ಅಪರಾಧಿ ಎಂದು ನ್ಯಾಯಾಲಯವು ಮೇ 5 ರಂದು ತೀರ್ಪು ನೀಡಿತ್ತು.

ಈ ಅಪಹರಣ ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಕುರಿತು ತಿಳಿಯದ್ದರಿಂದ ಶಹಾಬುದ್ದೀನ್ ಅವರ ಹೆಸರನ್ನು ಮಾತ್ರ ಎಫ್ಐಆರ್‌ನಲ್ಲಿ ನಮೂದಿಸಲಾಗಿತ್ತು.

ಅಪಹರಣ ಮಾಡಿದ ವ್ಯಕ್ತಿಯ ದೇಹ ಪತ್ತೆಯಾಗದ್ದರಿಂದ ಶಹಾಬುದ್ದೀನ್ ಕೊಲೆ ಮಾಡಿರುವ ಕುರಿತು ಅವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಲ್ಲಿ ನ್ಯಾಯಾಲಯ ವಿಫಲವಾಯಿತು.

ಈ ತೀರ್ಪಿನ ವಿರುದ್ಧ ಆದಷ್ಟು ಬೇಗನೆ ತಮ್ಮ ಕಕ್ಷಿದಾರರ ಪರ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಶಹಾಬುದ್ದೀನ್ ಅವರ ಪರ ವಕೀಲರಾಗಿರುವ ಜುಲ್ಫಿಕರ್ ಅಲಿ ಸುದ್ದಿಗಾರರಿಗೆ ಹೇಳಿದರು.
ಮತ್ತಷ್ಟು
ಸು.ಕೋ.ನಲ್ಲಿ ಇಂದು ಒಬಿಸಿ ಕೋಟ ವಿಚಾರಣೆ
ಉ.ಪ್ರದೇಶ: ಇಂದು ಅಂತಿಮ ಹಂತದ ಮತದಾನ
ಶಾಂತಿ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು:ಯಾಸಿನ್
ಸಿಬಿಎಸ್ಇ ಪಠ್ಯದಲ್ಲಿ ಲೈಂಗಿಕಕ್ಕೆ ಖೊಕ್‌ : ಅರ್ಜುನ್ ಸಿಂಗ್
ಹಣದುಬ್ಬರ ಮಿತಗೊಳಿಸಬೇಕು: ಚಿದಂಬರಂ
ಉ.ಪ್ರ - ಮಾಯಾಗೆ ಕಾಂಗ್ರೆಸ್‌ ಬೆಂಬಲ ಸಾಧ್ಯತೆ