ಕೇಂದ್ರ ಮಂತ್ರಿಮಂಡಲದಿಂದ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ದಯಾನಿಧಿ ಮಾರನ್ ದಿಲ್ಲಿಯಲ್ಲಿ ಪ್ರಧಾನಮಂತ್ರಿ ಮನ್‌ಮೋಹನ್ ಸಿಂಗ್‌ರನ್ನು ಭೇಟಿ ಮಾಡುವ ಸಂಭವವಿದೆ ಎಂದು ಅವರಿಗೆ ಸಮೀಪವರ್ತಿ ಮೂಲಗಳಿಂದ ತಿಳಿದುಬಂದಿದೆ.
ಊಟಿಯಲ್ಲಿ ತಮ್ಮ ರಜಾದಿನವನ್ನು ಕಳೆಯುತ್ತಿದ್ದ ಮಾರನ್ ಈ ಮೊದಲು ಚೆನ್ನೈಗೆ ತೆರಳಿದ್ದರು.ಡಿಎಂಕೆಯಿಂದ ಕೇಂದ್ರ ಸಂಪುಟದಿಂದ ಅವರನ್ನು ತೆಗೆದು ಹಾಕುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಅವರು ಪ್ಯಾಕ್ಸ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿಗೆ ಕಳುಹಿಸಿದ್ದರು.
ಮಾರನ್ ಹೇಳಿಕೆಯಲ್ಲಿ ನಾನು ನನ್ನ ಪಕ್ಷದ ನಾಯಕರಿಗೆ ನಂಬಿಕೆದ್ರೋಹ ಮಾಡುವ ಯೋಚನೆಯಲಿಲ್ಲ. ಒಂದು ವೇಳೆ ನಾಯಕ ಮತ್ತು ಕುಟುಂಬಕ್ಕೆ ತೃಪ್ತಿಯಾಗುವುದಾದರೆ ನಾನು ಪಕ್ಷ ಮತ್ತು ಸಂಪುಟದಿಂದ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದರು.
ಅವರು ಚೆನ್ನೈಯಲ್ಲಿ ಸ್ವಲ್ಪ ಹೊತ್ತು ತಂಗಿ ನಂತರ ದಿಲ್ಲಿಗೆ ತೆರಳಲಿದ್ದಾರೆ. ಇದಕ್ಕೂ ಮುಂಚೆ ಅವರು ಪಕ್ಷದ ನಾಯಕ ಕರುಣಾನಿಧಿಯವರನ್ನು ಭೇಟಿಯಾಗುತ್ತಾರೋ ಎಂಬುದು ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.
|