ಸಿಖ್ ಸಮುದಾಯದಲ್ಲಿ ಭಿನ್ನತೆ ತೋರುವಂತೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತಿನಿಂದಾಗಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸಿ, ನಾಗರಿಕರಲ್ಲಿ ಸುರಕ್ಷಿತ ಭಾವನೆ ಮೂಡಿಸಲು ಪಂಜಾಬ್ ಪೊಲೀಸರು ಅಮೃಸರದ ವಿವಿಧ ಭಾಗಗಳಲ್ಲಿ ಪಥಸಂಚಲನ ನಡೆಸಿದರು. ಅಮೃತಸರದ ಹಿರಿಯ ಪೊಲೀಸ್ ಸುಪರಿಟೆಂಡೆಂಟ್ ಕುನ್ವಾರ್ ವಿಜಯ್ ಸಿಂಗ್ ಮಾತನಾಡಿ ನಾವು ಈ ದಿಶೆಯಲ್ಲಿ ಪ್ರತಿ ಬೆಳವಣಿಗೆಯ ಮೇಲೆ ಕಣ್ಣು ಇಟ್ಟಿದ್ದೇವೆ ಎಂದು ಹೇಳಿದರು.
ಸಿಖ್ ಸಂಘಟನೆ ಮತ್ತು ದೆರಾ ಸಚಾ ಸೌಧ ಹಿಂಬಾಲಕರ ನಡುವೆ ಇನ್ನೊಮ್ಮೆ ಘರ್ಷಣೆ ನಡೆಸುವ ಆತಂಕ ಇದ್ದು, ಪೊಲೀಸರು ಕಟ್ಟೆಚ್ಚರದಿಂದ ಇದ್ದಾರೆ.ಸತತ ಎರಡು ದಿನಗಳು ನಡೆದ ಈ ಎರಡೂ ವಿರೋಧಿ ಪಂಗಡಗಳ ಘರ್ಷಣೆಯಿಂದ ಕೆಲವು ಜನರು ಮತ್ತು ಪೊಲೀಸರು ಗಾಯಕ್ಕೊಳಗಾಗಿದ್ದಾರೆ.
ಸ್ಥಳೀಯ ಪತ್ರಿಕೆಯೊಂದು ಸಿಖ್ ಧಾರ್ಮಿಕ ಪಂಗಡವಾದ ಡಿಎಸ್ಎಸ್‌ನ ಮುಖ್ಯಸ್ಥ ಬಾಬ ಗುರ್ಮೀತ್ ಸಿಂಗ್ ರಾಂ ರಹೀಂರನ್ನು, 10ನೇ ಸಿಖ್ ಸಮುದಾಯದ ಗುರು ಗೊಬಿಂದ್ ಸಿಂಗ್ ಗೆ ಹೋಲುವಂತೆ ಅಲಂಕರಿಸಿದ ಜಾಹಿರಾತು ಪ್ರಕಟಿಸಿದ ಹಿನ್ನೆಲೆಯಲ್ಲಿ ಬಟಿಂದಾದಲ್ಲಿ ಸೋಮವಾರದಂದು ಈ ಘರ್ಷಣೆ ಭುಗಿಲೆತ್ತಿತು.
ಈ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ ಡಿಎಸ್ಎಸ್ ಕಾರ್ಯಕರ್ತರು ವಾಹನಗಳಿಗೆ ಬೆಂಕಿ ಹಚ್ಚಿದರು ಮತ್ತು ಪೊಲೀಸರ ಮೇಲೆ ಕಲ್ಲು ಎಸೆದು, ಪೊಲೀಸರು ವಿರೋಧಿ ಪಂಗಡದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಯಾವತ್ತೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಡಿಕೊಂಡಿದ್ದು, ಈ ಸಮಾಜ ವಿರೋಧಿ ಕೆಲವರು ತಮ್ಮ ನಂಬಿಕೆಗೆ ಚ್ಯುತಿ ತರುವಂತೆ ಯತ್ನಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ನಾವು ಈ ಚಳುವಳಿಯನ್ನು ಮುಂದುವರಿಸಲಿದ್ದೇವೆ ಎಂದು ಡಿಎಸ್ಎಸ್ ಸದಸ್ಯ ಹರ್ಜಿಂದರ್ ಸಿಂಗ್ ಹೇಳಿದ್ದಾರೆ.
ರಾಂ ರಹೀಂ ಅನುಯಾಯಿಗಳೂ ಪೊಲೀಸರನ್ನು ಟೀಕಿಸಿದ್ದು ನಾವು ಪೊಲೀಸರಿಗೆ ಈ ಮೊದಲೇ ಕೆಲವು ಸಮಾಜ ವಿರೋಧಿಗಳು ಖಡ್ಗ ಹಿಡಿದು ಕೊಂಡು ಸುತ್ತಾಡುತ್ತಿದ್ದಾರೆ ಎಂಬ ಎಚ್ಚರಿಕೆ ಕೊಟ್ಟಿದ್ದೆವು. ಆದರೆ ಪೊಲೀಸರು ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಈ ಘರ್ಷಣೆ ರಾಜ್ಯದ ಹಲವು ಪ್ರಮುಖ ನಗರಗಳಿಗೆ ವಿಸ್ಥರಿಸಿದೆ. ಸಿಖ್ ಸಂಘಟನೆ ಮತ್ತು ದಂದಮಿ ತಕ್ಸಲ್ ಅನುಯಾಯಿಗಳು ಡಿಎಸ್ಎಸ್ ಮುಖ್ಯಸ್ಥನ ಪುಥಳಿಕೆಯನ್ನು ಹೊತ್ತಿಸಿ ಪ್ರತಿಭಟನೆ ಸಲ್ಲಿಸಿದರು. ಈ ಪ್ರತಿಭಟನಾಕಾರರರು ಖಡ್ಗ ಮತ್ತು ಭಿತ್ತಿಚಿತ್ರ ಹಿಡಿದುಕೊಂಡು ರಸ್ಥೆಯಲ್ಲಿ ಜಾತಾ ನಡೆಸಿದರು.
|