ಗುಜರಾತಿನ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವ ಕುರಿತಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಲಿದೆ.
ಮೂಲಗಳ ಪ್ರಕಾರ ನಿನ್ನೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ತನಿಖಾ ವರದಿ ಪ್ರಕಾರ ಬಂಧಿತ ಪೊಲೀಸ್ ಅಧಿಕಾರಿಗಳು ಅಪರಾಧ ಪ್ರಕರಣದಲ್ಲಿ ತಾವು ಭಾಗಿಯಾಗಿದ್ದೇವೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಈ ತಪ್ಪೊಪ್ಪಿಗೆ ಹೇಳಿಕೆ ಬಂಧಿತ ಮೂವರು ಐಪಿಎಸ್ ಅಧಿಕಾರಿಗಳಲ್ಲಿ ಯಾರಾದರೊಬ್ಬರಿಂದ ಬಂದಿದೆಯೋ ಅಥವಾ ನಂತರ ಬಂಧಿತರಾದ ಇವರ ಅಧೀನಾಧಿಕಾರಿಗಳಿಂದ ಬಂದಿದೆಯೋ ಎಂಬುದು ಬಹಿರಂಗವಾಗಿಲ್ಲ.
ತಪ್ಪೊಪ್ಪಿಗೆ ನೀಡಿದ ಅಧಿಕಾರಿ ಈ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತಂಡದಿಂದ ಒಟ್ಟುಗೂಡಿಸಲಾದ ಸಾಂದರ್ಭಿಕ ಮತ್ತು ಭೌತಿಕ ಸಾಕ್ಷಿಯನ್ನು ದೃಡಪಡಿಸಿದ್ದಾನೆ ಎಂದು ವರದಿಯಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ಬಂಧನ ವಾಗಲಿದೆ ಎಂದು ಎಟಿಆರ್ ಹೇಳಿದೆ.
ತನಿಖಾ ತಂಡದ ಅಧ್ಯಕ್ಷೆ ಐಜಿಪಿ ಗೀತಾ ಜೋಹರಿ ಮಾತನಾಡುತ್ತಾ ಆಂದ್ರಪ್ರದೇಶದ ಪೊಲೀಸ್ ಪಾತ್ರವನ್ನೂ ತನಿಖೆಗೆ ಒಳಪಡಿಸಲಾಗಿದ್ದು, ಮತ್ತು ಈ ಬಗೆಗಿನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ತಮ್ಮ ವರ್ಗಾವಣೆ ಮತ್ತು ಆ ಸ್ಥಾನಕ್ಕಾಗಿನ ಇನ್ನೊಬ್ಬ ಅಧಿಕಾರಿ ನೇಮಕದ ಬಗ್ಗೆ ಉಲ್ಲೇಖಿಸಿದ ಜೊಹ್ರಿ ಈ ವರ್ಗಾವಣೆಯಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ. ಗುಜರಾತ್ ಸರ್ಕಾರ ಪೊಲೀಸ್ ನಿಯಮದ ಪ್ರಕಾರ ತನಿಖೆಯನ್ನು ಪ್ರತ್ಯೇಕ ಅಧಿಕಾರಿಗೆ ಕೈಗೊಪ್ಪಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸುದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಿಸುವುದು ಸಾಮಾನ್ಯ ವಾಡಿಕೆಯಾಗಿದೆ ಎಂದು ಹೇಳಿದರು. ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿದ ಗುಜರಾತ್ ಐಜಿಪಿ ಸಿಐಡಿ (ಅಪರಾಧ) ಗೀತಾ ಜೋಹ್ರಿರನ್ನು ತನಿಖೆಯಿಂದ ತೆಗೆದು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
|