ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನ ಬಾರಿಗಿಂತ ಪ್ರಗತಿ ಸಾಧಿಸಿದ್ದರೂ ,ನಿರೀಕ್ಷೆಯಂತೆ ಗೆಲುವು ಸಾಧಿಸದಿರಲು ಸಂಘಟನಾತ್ಮಕ ದೋಷಗಳು ಕಾರಣವಾಗಿವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಯುಪಿ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನವನ್ನು ನಿರಾಶಾದಾಯಕ ಎಂದು ಹೇಳಿರುವ ಸೋನಿಯಾ ಗಾಂಧಿ ಗುಜರಾತ್ ಮತ್ತು ಗೋವಾದ ವಿಧಾನಸಭೆ ಚುನಾವಣೆಗಾಗಿ ಸಿದ್ದತೆ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಯುಪಿಯಲ್ಲಿ ನಡೆಸಿದ ಸ್ಫೂರ್ತಿಯುತ ಚುನಾವಣಾ ಪ್ರಚಾರದಿಂದಾಗಿ ಪಕ್ಷಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಆದರೆ ಸಂಘಟಿತವಾಗಿ ನಾವು ಆ ಬೆಂಬಲವನ್ನು ಮತಗಳಾಗಿ ಪರಿವರ್ತಿಸಲು ಸಾದ್ಯವಾಗಲಿಲ್ಲ ಎಂದು ಅವರು ಹೇಳಿದರು. ಅವರು ಕಾಂಗ್ರೆಸ್ ಸಂಸದೀಯ ಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗುಜರಾತಿನಲ್ಲಿ ಮುಂದೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ನಿಸ್ಸಂಶಯವಾಗಿ ಕೋಮುವಾದ ಗಲಬೆಯನ್ನು ಹುಟ್ಟುಹಾಕಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ನೆನಪಿಸಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಉತ್ತಮ ಪ್ರದರ್ಶನ ತೋರಿತ್ತು. ಇದರಿಂದ ರಾಜ್ಯದ ಜನರು ಗುಜರಾತಿನ ಜಾತ್ಯಾತೀತ ಪರಂಪರೆಯನ್ನು ಬಲಪಡಿಸುವುದಕ್ಕಾಗಿ ನಮಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಗುಜರಾತ್ ನಕಲಿ ಎನ್‌ಕೌಂಟರ್ ಬಗ್ಗೆ ಮಾತನಾಡಿದ ಅವರು, ಗುಜರಾತ್ ಪೊಲೀಸ್ ಇಲಾಖೆ ಭಯೋತ್ಪಾದನೆ ಹೆಸರಿನಲ್ಲಿ ಮುಗ್ದ ಜನರನ್ನು ಕೊಲ್ಲುವಷ್ಟು ಯಾವರೀತಿ ಮುಂದುವರಿದಿದ್ದಾರೆ ಎಂಬ ಆಘಾತಕಾರಿ ಇದರಿಂದ ವಿಷಯ ತಿಳಿದು ಬಂದಿದೆ.
ಮಾನವ ಹಕ್ಕು ವಿಷಯಕ್ಕೆ ಕೋಮುವಾದಿ ಬಣ್ಣ ಕೊಡಲಾಗಿದೆ, ಇದು ರಾಜ್ಯ ಸರ್ಕಾರದ ಎದ್ದು ಕಾಣುವ ಪ್ರಕ್ಷಪಾತೀಯ ಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
|