ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಧುರೈ ಹಿಂಸಾಚಾರ - ದುಷ್ಕರ್ಮಿ ಪೊಲೀಸರಿಗೆ ಶರಣು
webdunia
ತಮಿಳುನಾಡಿನ ಮಧುರೈಯಲ್ಲಿ 'ದಿನಕರನ್' ಪತ್ರಿಕಾ ಕಛೇರಿ ಮೇಲೆ ಧಾಳಿ ಮಾಡಿ ಮೂರು ಮಂದಿ ಸಿಬ್ಬಂದಿಗಳ ಸಾವಿಗೆ ಕಾರಣವಾದ ಹಿಂಸಾಚಾರ ಕೃತ್ಯದ ಪ್ರಮುಖ ಆರೋಪಿಯು ಮಧುರೈ ಗ್ರಾಮೀಣ ಪೊಲೀಸ್‌ ಠಾಣೆಗೆ ಹಾಜರಾಗಿ ಕಾನೂನಿಗೆ ಶರಣಾಗತನಾಗಿದ್ದಾನೆ.

ಪ್ರಸ್ತುತ ಆರೋಪಿಯನ್ನು ಪಾಂಡಿ ಎಂದು ಗುರುತಿಸಲಾಗಿದ್ದು, ಈತನನ್ನು ಮೇಲೂರ್‌ನಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದಿನಕರನ್ ಪತ್ರಿಕೆಯಲ್ಲಿ ಪ್ರಕಟಿಸಿಲಾದ ಮುಖ್ಯಮಂತ್ರಿ ಕರುಣಾನಿಧಿಯವರ ಉತ್ತರಾಧಿಕಾರಿ ಯಾರು ಎಂಬ ಕುರಿತಾದ ಜನಮತ ಗಣನೆಯ ಪ್ರಕರಣಕ್ಕಾಗಿ ಹಿಂಸಾಕೃತ್ಯ ನಡೆದಿತ್ತು.

ಜನಮತ ಗಣನೆಯಲ್ಲಿ ಕರುಣಾನಿಧಿಯವರ ಹಿರಿಯ ಮಗ ಅಳಗಿರಿ ಅತಿ ಕಡಿಮೆ ಮತ ಗಳಿಸಿರುವುದಾಗಿ ಪ್ರಕಟಿಸಲಾಗಿತ್ತು. ಇದರಿಂದ ಕೆರಳಿದ ಅವರ ಬೆಂಬಲಿಗರು ಮೇ 9 ರಂದು ದಿನಕರನ್ ಕಛೇರಿ ಮೇಲೆ ಧಾಳಿ ನಡೆಸಿ ಮೂರು ಮಂದಿಯ ಸಾವಿಗೆ ಕಾರಣವಾಗಿದ್ದರು.

ಈ ಪ್ರಕರಣ ರಾಜಕೀಯ ಕೋಲಹಲಕ್ಕೆ ಕಾರಣವಾಗಿ ದಯಾನಿಧಿ ಮಾರನ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಕೊಟ್ಟಿರುವ ಘಟನೆಯನ್ನೂ ಇಲ್ಲಿ ಸ್ಮರಿಸಬಹುದಾಗಿದೆ ಬಂತು.
ಮತ್ತಷ್ಟು
ಗುಜರಾತ್‌-ಗೋವಾ ಚುನಾವಣೆಗೆ ಸಿದ್ಧರಾಗಿ: ಸೋನಿಯಾ
ಕಾನಿಷ್ಕಾ: ಭದ್ರತಾ ಶಿಷ್ಟಾಚಾರ ಅನುಸರಿಸಲು ವಿಫಲ
ನಕಲಿ ಎನ್‌ಕೌಂಟರ್‌ ತನಿಖೆ ಸಿಬಿಐಗೆ:ಇಂದು ನಿರ್ಧಾರ
ಪಂಜಾಬ್‌ ಹಿಂಸೆ: ಪೊಲೀಸ್‌ ಕಟ್ಟೆಚ್ಚರ
ಬಸ್ ದುರಂತ : 20 ಪ್ರಯಾಣಿಕರ ಸಜೀವ ದಹನ
ರಾಷ್ಟ್ರಪತಿ ಹುದ್ದೆ: ಎನ್‌ಡಿಎ ಅಭ್ಯರ್ಥಿ ಅಟಲ್‌ ನಿರ್ಧಾರ