ಬಾಲಿವುಡ್ ನಟಿ ಶಿಲ್ಫಾಶೆಟ್ಟಿಯವರ ಚುಂಬನ ವಿವಾದದಲ್ಲಿ ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ನೀಡಿದ್ದ ಬಂಧನ ಆದೇಶ ಹಾಗೂ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅಧ್ಯಕ್ಷತೆಯ ಪೀಠ ಇದರ ವಿಚಾರಣೆಗೆ ತಡೆಯಾಜ್ಞೆ ನೀಡುತ್ತಾ, ಈ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಮುಂಬೈಗೆ ವರ್ಗಾಯಿಸಬೇಕೆಂಬ ಶೆಟ್ಟಿಯವರ ಅರ್ಜಿಯನ್ವಯ ಪ್ರತಿವಾದಿಗಳಿಗೆ ನೋಟೀಸು ಜಾರಿ ಮಾಡಲಾಗಿದೆ. ನಟಿ ಶೆಟ್ಟಿ ವಿದೇಶಕ್ಕೆ ಹೋಗುವುದಕ್ಕೆ ನಿರ್ಬಂಧ ಹೇರಿರುವ ಸ್ಥಳೀಯ ನ್ಯಾಯಾಲಯದ ಆದೇಶಕ್ಕೂ ಪೀಠ ತಡೆಯಾಜ್ಞೆ ನೀಡಿದೆ.ಶಿಲ್ಪಾಶೆಟ್ಟಿಯವರು ಉಚ್ಚನ್ಯಾಯಾಲಯದ ಮೊರೆ ಹೋಗಿ ಹಾಲಿವುಡ್ ತಾರೆ ರಿಚರ್ಡ್ ಗೇರ್ ಜತೆಗಿನ ತನ್ನ ಚುಂಬನ ವಿವಾದಕ್ಕೆ ಸಂಬಂದಿಸಿದಂತೆ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ಮುಂಬೈ ನ್ಯಾಯಾಲಯಕ್ಕೆ ಹಸ್ತಾಂತರಿಸ ಬೇಕು ಎಂದು ಕೋರಿದ್ದರು.
ಶಿಲ್ಫಾ ಶೆಟ್ಟಿ ತಮ್ಮ ಅರ್ಜಿಯ ಎಫ್ರಿಲ್ 15 ರಂದು ನಡೆದ ಘಟನೆಯನ್ನು ಮಾದ್ಯಮದವರು ತಪ್ಪಾಗಿ ತೋರಿಸಿದ್ದು, ಅದು ನನ್ನ ಮೇಲೆ ಜೋಧಪುರ್ ಮ್ಯಾಜಿಸ್ಟ್ರೇಟರ್ ಎದುರು ಮತ್ತು ಗಜಿಯಾಬಾದ್‌ನಲ್ಲಿ ಖಾಸಗಿ ಆರೋಪ ಧಾಖಲಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.
|