ದೇರಾ ಸಾಚಾ ಸೌದಾ ಮುಖ್ಯಸ್ಥ ಬಾಬಾ ಗುರ್ಮಿತ್ ಸಿಂಗ್ ರಾಮ್ ರಹಿಮ್ ಅವರ ವಿರುದ್ಧ ಬತಿಂಡಾದಲ್ಲಿ ಪಂಜಾಬ್ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿರುವ ಕೋಮು ಸಾಮರಸ್ಯವನ್ನು ಕದಡಲು ಯತ್ನಿಸಿದ ಆರೋಪದ ಮೇಲೆ ಪೋಲಿಸರು ದೇರಾ ಮುಖ್ಯಸ್ಥರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಫ್ಐಆರ್ ದಾಖಲೆಯಲ್ಲಿ ತಿಳಿಸಲಾಗಿದೆ,
ದೇರಾ ಮುಖ್ಯಸ್ಥರು ಸಿಖ್ ಗುರುವಿನ ಅನುಕರಣೆ ಮಾಡುವ ಕುರಿತು ಒಡಮೂಡಿದ ಜಾಹೀರಾತು ಬಗ್ಗೆ ದೇರಾ ಸಾಚಾ ಸೌದಾವು ಶನಿವಾರದಂದು ವಿಷಾದ ವ್ಯಕ್ತಪಡಿಸಿದ ಒಂದು ಪುಟದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ದೇರಾ ಮುಖ್ಯಸ್ಥರು ಸಿಖ್ ಗುರು ಗೋವಿಂದ್ ಸಿಂಗ್ ಅವರ ಅನುಕರಣೆ ಮಾಡುವ ರೀತಿಯ ಭಾವಚಿತ್ರವೊಂದು ಪಂಜಾಬಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದರಿಂದ ಸಿಖ್ ಹಾಗೂ ದೇರಾ ಬೆಂಬಲಿಗರ ನಡುವೆ ಕಳೆದ ಒಂದು ವಾರದಿಂದ ತಿಕ್ಕಾಟ ನಡೆಯುತ್ತಿದೆ.
|