ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಭಯೋತ್ಪಾದನಾ ನಿಗ್ರಹಕ್ಕೆ ಭಾರತಕ್ಕೆಚೀನ ಬೆಂಬಲ
webdunia
IndianFlag
PTI
ಎರಡೂ ದೇಶಗಳ ಮಿಲಿಟರಿ ಚಟುವಟಿಕೆ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ದೇಶಗಳು ಇದೀಗ ಭಯೋತ್ಪಾದನಾ ನಿಗರಹ ಕಾರ್ಯಾಚರಣೆಯಲ್ಲಿ ಪರಸ್ಪರ ಸಹಕರಿಸಲಿವೆ.

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಜೆ ಜೆ ಸಿಂಗ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವಂತೆ, ಉಭಯ ರಾಷ್ಟ್ರಗಳ ಸೇನಾ ಸಂಬಂಧವನ್ನು ಬಲ ಗೊಳಿಸುವ ಉದ್ದೇಶದಿಂದ ಭಾರತ ಮತ್ತು ಚೀನ ಭಯೋತ್ಪಾದನಾ ನಿಗ್ರಹದತ್ತ ತಮ್ಮ ಮೊತ್ತ ಮೊದಲ ಜಂಟಿ ಸೇನಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಿದೆ ಎಂದಿದ್ದಾರೆ.

ಭಾರತ ಮತ್ತು ಚೀನ ಸೇನೆಗಳು ಗಡಿ ಸ್ನೇಹಪರ ಮಾತುಕತೆಗಳನ್ನು ನಡೆಸಿವೆಯಾದರೂ, ಸೈನೊ-ಇಂಡಿಯನ್ ಹಿಮಾಲಯ ಗಡಿಯ 3,000ಕಿ.ಮೀ. ಉದ್ದಕ್ಕೂ ಕಳೆದ ನಾಲ್ಕು ದಶಕಗಳಿಂದ ಮುಖಾಮುಖಿಯಲ್ಲಿ ಬಂಧಿಯಾಗಿದ್ದ ಸೇನೆಗಳು ಈಗ ಇದೇ ಮೊದಲ ಬಾರಿಗೆ ಎರಡೂ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಆಶಯ ಹೊಂದಿವೆ.

ತಾಂತ್ರಿಕವಾಗಿ, ಚೀನ ಅಂತಹ ಕಾರ್ಯಾಚರಣೆ ನಡೆಸುವುದಕ್ಕೆ ಒಪ್ಪಿದೆಯಾದರೂ, ಈ ಮೊದಲ ಕಾರ್ಯಾಚರಣೆ ಚೀನಾ ನೆಲದಲ್ಲಿ ನಡೆಯುವುದೋ ಅಥವಾ ಭಾರತೀಯ ನೆಲದಲ್ಲಿ ನಡೆಯುವುದೋ ಎಂಬುದರ ಬಗ್ಗೆ ಭೇಟಿಯ ಸಂದರ್ಭದಲ್ಲಿ ತಾವು ವಿವರಗಳನ್ನು ನಿರ್ಧರಿಸುವುದಾಗಿ ಸೇನಾ ಮುಖ್ಯಸ್ಥರು ತಿಳಿಸಿದರು.
ಮತ್ತಷ್ಟು
ದೇರಾ ಮುಖ್ಯಸ್ಥರ ವಿರುದ್ಧ ಪೋಲಿಸ್ ಪ್ರಕರಣ
ಮಸೀದಿ ಬಳಿ ಸ್ಪೋಟ: ಹೈದರಾಬಾದ್ ಶಾಂತ
ಶಿಲ್ಫಾ ಶೆಟ್ಟಿ ವಿರುದ್ದದ ವಿಚಾರಣೆಗೆ ತಡೆ
ಮಧುರೈ ಹಿಂಸಾಚಾರ - ದುಷ್ಕರ್ಮಿ ಪೊಲೀಸರಿಗೆ ಶರಣು
ಗುಜರಾತ್‌-ಗೋವಾ ಚುನಾವಣೆಗೆ ಸಿದ್ಧರಾಗಿ: ಸೋನಿಯಾ
ಕಾನಿಷ್ಕಾ: ಭದ್ರತಾ ಶಿಷ್ಟಾಚಾರ ಅನುಸರಿಸಲು ವಿಫಲ