ಕೈಗಾರಿಕಾ ಯೋಜನೆಗಾಗಿ ರೈತರ ಭೂಸ್ವಾಧೀನ ವಿಷಯದಲ್ಲಿ ವಿವಾದಕ್ಕೀಡಾಗಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ಪ್ರಕರಣದ ಕುರಿತು ಮೇ 24 ರಂದು ಚರ್ಚೆ ನಡೆಸಲು ಎಡರಂಗ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಒಪ್ಪಿಗೆ ಸೂಚಿಸಿರುವುದು ಹೊಸ ಬೆಳವಣಿಗೆಯಾಗಿದೆ.
ಫಾರ್‌ವಾರ್ಡ್ ಬ್ಲಾಕ್ ನಾಯಕ ಅಶೋಕ ಘೋಷ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ನಡುವೆ ಪೂರ್ವ ನಿದರ್ಶನವಿಲ್ಲದೆ ಏರ್ಪಟ್ಟ ಮಾತುಕತೆಯೇ ಈ ಬೆಳವಣಿಗೆಗೆ ಕಾರಣವಾಗಿದೆ.
ರಾಜಕೀಯದ ಉನ್ನತ ವ್ಯಕ್ತಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆಯೆ ಎಂಬುವುದರ ಬಗ್ಗೆ ಇನ್ನೂ ಮಾಹಿತಿಗಳು ಬಂದಿಲ್ಲ. ಆದರೆ, ನಂದಿಗ್ರಾಮದಲ್ಲಿ ಉಂಟಾಗಿರುವ ಅಸ್ಥಿರತೆಯನ್ನು ಹೋಗಲಾಡಿಸುವ ಮೊದಲ ಹೆಜ್ಜೆ ಇದಾಗಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಹಾಗೂ ಸಿಬಿಐ (ಎಂ)ನ ಮಿತ್ರರಾದ ಬಿಮನ್ ಬೋಸ್ ಅವರ ನಡುವೆ ಏರ್ಪಟ್ಟ ಶಾಂತಿ ಮಾತುಕತೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾಗೆ ಅಸಮಾಧಾನ ಉಂಟಾಗಿತ್ತು.
|