ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಯುಪಿಎ ಸರ್ಕಾರಕ್ಕೆ ನಾಲ್ಕನೇ ಹುಟ್ಟು ಹಬ್ಬದ ಸಂಭ್ರಮ
webdunia
MANMOHAN SINGH
PTI
ಹಲವಾರು ಸಮಸ್ಯೆಗಳನ್ನು ಎದುರಿಸಿ ಮೂರು ವರ್ಷಗಳ ಆಡಳಿತಾವಧಿಯನ್ನು ಯಶಸ್ವಿಯಾಗಿ ಪೂರೈಸಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ತ್ವರಿತ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನ ಇಟ್ಟುಕೊಂಡಿರುವ ಯುಪಿಎ ಸರಕಾರವು ಕೆಲವು ನೀತಿ ನಿಯಮಗಳ ಮಾರ್ಪಾಡು ಮಾಡುವ ಸಂಬಂಧವಾಗಿ ತಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ಮೈತ್ರಿ ಪಕ್ಷಗಳ ಸಭೆ ಕರೆದಿದೆ.

ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮೇ 22 ರಂದು ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಮೈತ್ರಿ ಪಕ್ಷದ ಪ್ರತಿಯೊಬ್ಬ ಸಂಸದರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದೇ ಸಂದರ್ಭದಲ್ಲಿ ಯುಪಿಎ ಸರಕಾರದ ಮುಂದಾಳತ್ವದಲ್ಲಿ ಉಂಟಾದ ಆರ್ಥಿಕ ಬೆಳವಣಿಗೆಯ ಜೊತೆಗೆ ರಫ್ತು ವಿನಿಮಯ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ನಿರಾತಂಕತೆಯ ಪ್ರಗತಿ ಮತ್ತು ನೆರೆಯ ಪಾಕಿಸ್ತಾನದೊಂದಿಗೆ ನಡೆದಿರುವ ಮಾತುಕತೆ ಬೆಳವಣಿಗೆ ಹೀಗೆ ವಿವಿಧ ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಅದೇ ರೀತಿ ಭಾರತ ಅಮೆರಿಕ ನಡುವಿನ ನಾಗರಿಕ ಪರಮಾಣು ಮಾತುಕತೆ ಒಪ್ಪಂದದ ಮಹತ್ವದ ಬೆಳವಣಿಗೆಯು ಆರ್ಥಿಕ ತಜ್ಞ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ಪ್ರಮುಖ ಸಾಧನೆ ಮೈಲಿಗಳಲ್ಲಿ ಒಂದಾಗಿದೆ.
ಮತ್ತಷ್ಟು
ಮಮತಾ ಒಪ್ಪಿಗೆ- ಮೇ 24ಕ್ಕೆ ಸರ್ವಪಕ್ಷ ಸಭೆ
ಭಯೋತ್ಪಾದನಾ ನಿಗ್ರಹಕ್ಕೆ ಭಾರತಕ್ಕೆಚೀನ ಬೆಂಬಲ
ದೇರಾ ಮುಖ್ಯಸ್ಥರ ವಿರುದ್ಧ ಪೋಲಿಸ್ ಪ್ರಕರಣ
ಮಸೀದಿ ಬಳಿ ಸ್ಪೋಟ: ಹೈದರಾಬಾದ್ ಶಾಂತ
ಶಿಲ್ಫಾ ಶೆಟ್ಟಿ ವಿರುದ್ದದ ವಿಚಾರಣೆಗೆ ತಡೆ
ಮಧುರೈ ಹಿಂಸಾಚಾರ - ದುಷ್ಕರ್ಮಿ ಪೊಲೀಸರಿಗೆ ಶರಣು