ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಒಳಗೊಂಡಿರುವ ತಾಜ್ ಪ್ರಕರಣದ ವಿಚಾರಣೆಯನ್ನು ಜೂನ್ 1 ರವರೆಗೆ ಮುಂಡೂದಲಾಗಿದೆ ಎಂದು ವಿಶೇಷ ಸಿಬಿಐ ನ್ಯಾಯಾಲಯವು ಬುಧವಾರ ಹೇಳಿದೆ.
ಏಜೆನ್ಸಿ ತಮ್ಮ ಪ್ರಾಸಿಕ್ಯೂಶನ್‌ಗೆ ಒಪ್ಪಿಗೆ ಪಡೆಯಬೇಕೆಂದು ನಿರ್ದೇಶಿಸಿದ್ದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಲಾಗಿದ್ದ ಮಧ್ಯಸ್ಥಿಕೆ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಸಿಬಿಐಗೆ ಪ್ರತ್ಯುತ್ತರ ಸಲ್ಲಿಸಲು ಆರೋಪಿಗಳಲ್ಲಿ ಒಬ್ಬರು ಕಾಲಾವಕಾಶ ಕೋರಿದ್ದರಿಂದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರು ಒಳಗೊಂಡಿರುವ ತಾಜ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ಸಿಬಿಐ ನ್ಯಾಯಾಲಯವು, ಬುಧವಾರ ಜೂನ್ 1ಕ್ಕೆ ವಿಚಾರಣೆಯನ್ನು ಮುಂದೂಡಿತು.
ತಾಜ್ ಪ್ರಕರಣದ ಆರು ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಉತ್ತರ ಪ್ರದೇಶದ ಮಾಜಿ ಕಾರ್ಯದರ್ಶಿ ಆರ್.ಕೆ.ಶರ್ಮಾ ಅವರೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಿಂದ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಮಕೈಗೊಳ್ಳದೆ ವಿಚಾರಣೆ ಮುಂದೂಡಿತು.
ಸಿಬಿಐನ ಪ್ರತಿಕ್ರಿಯೆಗೆ ಶರ್ಮಾ ಅವರಿಗೆ ಕಾಲಾವಕಾಶ ಬೇಕಾಗಿದೆ ಎಂದು ಶರ್ಮಾ ಪರ ವಕೀಲರು ಕೇಳಿಕೊಂಡ ನಂತರ, ವಿಶೇಷ ನ್ಯಾಯಾಧೀಶ (ಭ್ರಷ್ಟಾಚಾರ ನಿಗ್ರಹ)ರಾದ ರೇಖಾ ದಿಕ್ಷಿತ್ ಪ್ರಕರಣದ ವಿಚಾರಣೆ ಮುಂದೂಡಿದರು.
|