ಮಂಗಳೂರಿನಲ್ಲಿ ಒಎನ್‌ಜಿಸಿ ಸ್ಧಾವರ ವಿಸ್ತರಣಾ ಯೋಜನೆಗಾಗಿ ಶಂಕುಸ್ಧಾಪನೆ ನಡೆಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಶೀಘ್ರವೇ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಯಾನದ ಉದ್ಘಾಟನೆಗೆ ಜೂನ್ 2ರ ನಂತರ ದಿನಾಂಕ ನಿರ್ಧರಿಸಲಾಗುವುದು.ವಿಶೇಷ ಆರ್ಥಿಕ ವಲಯ ಸೇರಿದಂತೆ ಇಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ಸುದ್ದಿಗಾರರಿಗೆ ಹೇಳಿದರು.
ಅಲ್ಲದೆ ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲು ಕೇಂದ್ರ ಸಂಪುಟ ಉಪ ಸಮಿತಿ ರಚಿಸಲಾಗಿದ್ದು,ಅವರು ಸೂಕ್ತ ತೀರ್ಮಾನ ಕೊಡಲಿದ್ದಾರೆ ಎಂದರು.
ಮಂಗಳೂರಿನಲ್ಲಿ ಸ್ಧಾಪಿಸಲಾಗಿದ್ದು,ಪೂರ್ಣಪ್ರಮಾಣದ ಕಚೇರಿ ಆಗಬೇಕಿದ್ದಲ್ಲಿ ನಿರ್ದಿಷ್ಟವಾದ ಕಾರ್ಯಭಾರ ಇರಬೇಕಾಗುತ್ತದೆ.ಈಗ ಅಷ್ಟೊಂದು ಕಾರ್ಯಭಾರ ಈ ಕಚೇರಿಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
|