ಮಿಲಿಟರಿ ಕಾರ್ಯಾರಣೆಯೊಂದರಿಂದ ಮಾತ್ರ ಕಾಶ್ಮೀರದ ಸಮಸ್ಯೆ ಪರಿಹರಿಸಲು ಅಸಾಧ್ಯ ಎಂದು ಪ್ರಧಾನಿ ಡಾ.ಮನ್‌ಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ಕಡೆಗಳಿಂದಲೂ ಸಮಾನಾಂತರ ದೃಷ್ಟಿಕೋನದಿಂದ ಈ ಸಮಸ್ಯೆಯನ್ನು ಕಾಣಬೇಕಾಗಿದೆ.ಇದಕ್ಕೆ ಶಾಶ್ವತವಾದ ಪರಿಪಾರವನ್ನು ಕಂಡು ಹುಡುಕುವುದೇ ಮುಖ್ಯವಾಗಿದೆ.
ಯಾವುದೇ ರಾಜಕೀಯ ಅಥವಾ ಆಂತರಿಕ ಒಳಜಗಳವನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕಾಗಿದೆ.ಕಾಶ್ಮೀರ ಸಮಸ್ಯೆ ಪರಿಹಾರ ಎಲ್ಲರಿಗೂ ಸಮಾಧಾನ ತರುವಂತಹ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಅವರು ಹೇಳಿದರು.
ಅವರು ಆರ್.ಡಿ.ಪ್ರಧಾನ್ ಅವರ 1965 ವಾರ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತನಾಡಿದರು.
ನಾವು ಯಾವುದೇ ಭಯೋತ್ಪಾದಕ ಅಥವಾ ರಾಷ್ಟ್ರೀಯ ರಕ್ಷಣೆಯ ವಿಷಯದಲ್ಲಿ ಭಯಪಡಬೇಕಾದ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ನಿಟ್ಟಿನಲ್ಲಿ ದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರ ಸಹಕಾರವೂ ಅಗತ್ಯ.ಅನಾವಶ್ಯಕ ಗೊಂದಲಗಳನ್ನು ಹುಟ್ಟುಹಾಕುವುದರಿಂದ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತವೆ ಎಂದು ಹೇಳಿದರು.
|