ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾರತದ ತಿಲ್‍ವಿಂದರ್ ಸಿಂಗ್ ಪರಮಾರ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಕೆನಡ ಗೂಢಚಾರ ಸಂಸ್ಧೆ ತಿಳಿಸಿದೆ.
1985ರಲ್ಲಿ ಟೋರಾಂಟೋದಲ್ಲಿ ಕನಿಷ್ಕಾ ವಿಮಾನವನ್ನು ಬಾಂಬ್ ಮೂಲಕ ಸ್ಫೋಟಿಸಿದ ಪರಿಣಾಮ ಸುಮಾರು 329 ಮಂದಿ ಪ್ರಯಾಣಿಕರು ಬಲಿಯಾಗಿದ್ದರು.ಇದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರೇ ಸೇರಿದ್ದರು.
ಅಪಾಯಕಾರಿ ಭಯೋತ್ಪಾದಕನಾಗಿದ್ದ ತಿಲ್‍ವಿಂದರ್ ಸಿಂಗ್ ಪರಮಾರ್ ಈ ಘಟನೆಯ ಪ್ರಮುಖ ರೂವಾರಿಯಾಗಿದ್ದ ಎಂದು ಮಾಜಿ ಸಿಎಸ್‌ಐಎಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯ ಕುರಿತು ನಿವೃತ್ತ ನ್ಯಾಯಾಧೀಶರಾದ ಜಾನ್ ಮೇಜರ್ ಅವರು ತನಿಖೆ ನಡೆಸುತ್ತಿದ್ದು,ಈಗಾಗಲೇ ಕೆಲವು ಮಹತ್ವದ ಅಂಶಗಳು ಬಹಿರಂಗಗೊಂಡಿದ್ದವು.
ಈ ಮೊದಲು ಭಾರತ ಕೆನಡಾವನ್ನು ಎಚ್ಚರಿಸಿದ್ದರೂ ಕೂಡ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆಯೋಗ ಹೇಳಿತ್ತು.
1984ರಲ್ಲಿ ತಿಲ್‍ವಿಂದರ್ ಸಿಂಗ್ ಪರಮಾರ್ ಬಾಬರ್ ಖಾಲ್ಸಾ ಚಳವಳಿಯ ಮುಖ್ಯಸ್ಧನಾಗಿದ್ದ,ಈತ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ.
ಆ ಸಂದರ್ಭದಲ್ಲಿ ಉದ್ರೇಕಕಾರಿ ಹೇಳಿಕೆ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದ.ಅದಾಗಲೇ ಆತ ಐವತ್ತು ಸಾವಿರ ಹಿಂದೂಗಳನ್ನು ಕೊಲ್ಲಲು ಸಿಖ್ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದ.
|