ಡೇರಾ ಸಚ್ಚಾ ಸೌಧಾದ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ನೀಡಬೇಕೆಂದು ಕೋರಿ ಸರ್ವೋಚ್ಛನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನುಇಂದು ನಡೆಸಿ ನಿರ್ಧಾರ ಸ್ವೀಕರಿಸುವುದಾಗಿ ತಿಳಿಸಲಾಗಿದೆ.
ಸುಪ್ರೀಂಕೋರ್ಟ್ ನಿನ್ನೆ ಡೇರಾ ಸಚ್ಚಾ ಸೌಧಾದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ಒದಗಿಸುವಂತೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಜೂನ್ 4ರಂದು ನಡೆಸುವುದಾಗಿ ಸರ್ವೊಚ್ಛನ್ಯಾಯಾಲಯದ ನ್ಯಾಯಾಧೀಶರಾದ ಅರಿಜಿತ್ ಪಸಾಯತ್ ಹಾಗೂ ಡಿ.ಕೆ.ಜೈನ್ ತಿಳಿಸಿದ್ದರು.
ಆದರೆ ಡೇರಾ ಬಾಬಾ ಕ್ಷಮೆಯಾಚನೆಯ ನಂತರೂ ಸಿಖ್ ಸಮುದಾಯದ ಪ್ರಬಲ ಸಂಘಟನೆಯಾದ ಅಕಾಲ್ ತಾಕತ್ ಮೇ 27ರೊಳಗೆ ಡೇರಾ ಸಚ್ಚಾದ ಎಲ್ಲಾ ಕೇಂದ್ರಗಳನ್ನು ಮುಚ್ಚಬೇಕೆಂದು ಅಂತಿಮ ಆಜ್ಞೆ ನೀಡಿತ್ತು.ಇದರಿಂದಾಗಿ ನ್ಯಾಯಾಲಯ ಮುಂಚಿತವಾಗಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಡೇರಾ ಸಚ್ಚಾ ಸೌಧಾದ ಅನುಯಾಯಿ ಅಭಿಜಿತ್ ಭಗತ್ ,ಡೇರಾ ಸಚ್ಚಾದ ಕೇಂದ್ರಗಳಿಗೆ ರಕ್ಷಣೆ ಒದಗಿಸುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಮನವಿ ಸಲ್ಲಿಸಿದ್ದರು.
ಪಂಜಾಬಿನಲ್ಲಿ ಸಂತ ಗುರ್ಮಿತ್ ಸಿಂಗ್ ಅವರು ಧರಿಸಿದ ಉಡುಪು ಮತ್ತು ಅದೇ ದಿರಿಸಿನಲ್ಲಿ ಭಕ್ತರಿಗೆ ಅಮೃತ ನೀಡಿದ ಪ್ರಕರಣ ಸಂಪ್ರದಾಯವಾದಿ ಸಿಖ್ ಮತ್ತು ಡೇರಾ ಸಚ್ಚಾ ಸೌಧಾ ಪಂಥದ ಅನುಯಾಯಿಗಳ ನಡುವೆ ಗಲಭೆಗೆ ಕಾರಣವಾಗಿ ಇಡೀ ಪಂಜಾಬ್ ಅಶಾಂತಿಯ ವಾತಾವರಣದಲ್ಲಿ ಮುಳುಗಿತ್ತು.
ಇದು ನಮ್ಮ 10ನೆಯ ಗುರು ಗೋವಿಂದ ಸಿಂಗ್ ಧರಿಸುತ್ತಿದ್ದ ಉಡುಪು,ಅಮೃತ ನೀಡುವುದನ್ನು ರಾಮ ರಹೀಮ್ ಅನುಕರಣೆ ಮಾಡಿದ್ದಾರೆ, ಇದು ಧರ್ಮ ನಿಂದನೆ ಎಂದು ಸಿಖ್ ಧರ್ಮಾನುಯಾಯಿಗಳು ಗುರ್ಮಿತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಆ ನಂತರ ಶನಿವಾರದಂದು ಗುರ್ಮಿತ್ ತಾನು ಮಾಡಿರುವುದು ತಪ್ಪು ಎಂಬುದಾಗಿ ಕ್ಷಮಾಪಣೆ ಕೇಳುವುದರೊಂದಿಗೆ ಪರಿಸ್ಧಿತಿ ತಪಬಂದಿಗೆ ಬಂದಿತ್ತು.ಆದರೂ ಸಿಖ್ ಸಮುದಾಯ ಬಾಬಾ ವಿರುದ್ಧ ಕೇಸು ದಾಖಲಿಸಿದೆ.
|