ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಸ್ಫೋಟಕಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಂಟು ಮಂದಿಗೆ ಐದರಿಂದ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಟೈಗರ್ ಮೆಮೊನ್ ಸಮೀಪವರ್ತಿ ಹಾಗೂ ದಿಗಾಯ್ ಕರಾವಳಿ ಪ್ರದೇಶದಲ್ಲಿ ಸ್ಫೋಟಕವನ್ನು ಇಳಿಸಿದ ಆರೋಪ ಮೇಲೆ ಶಾಹೀದ್ ಖುರೇಶಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಆದರೆ ಕ್ಯುರೇಶಿ ಈಗಾಗಲೇ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದು,ನ್ಯಾಯಾಲಯದ ತೀರ್ಪು ಕೇಳಿ ಖುರೇಶಿ ತುಂಬಾ ಸಂತೋಷ ವ್ಯಕ್ತಪಡಿಸಿದ್ದ.
ರಾಯಘಡ್ ಜಿಲ್ಲೆಯ ಸಂದೇರಿ ಎಂಬಲ್ಲಿ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಸಂಘಟಿಸಿದ್ದ ಆರೋಪದಲ್ಲಿ ಇಸಾಕ್ ಹಜ್ ವಾನಿ ಹಾಗೂ ಮಗ ಸಿಕಂದರ್ ಹಜ್ ವಾನಿಗೆ ಏಳು ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.
ಅಲ್ಲದೆ ಇಸಾಕ್ ಹಜ್ ವಾನಿಗೆ ಎಪ್ಪತ್ತು ಸಾವಿರ ಮತ್ತು ಸಿಕಂದರ್ ಹಜ್‌ಗೆ ಹತ್ತು ಸಾವಿರ ರೂಪಾಯಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಶಹನವಾಜ್ ಹಜ್ ವಾನಿಗೆ ಐದು ವರ್ಷ ಜೈಲು ಮತ್ತು ಹತ್ತು ಸಾವಿರ ದಂಡ ವಿಧಿಸಿದರು.
ಸಂಜಯ್ ಗೈರು:ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ ತನ್ನ ತಂದೆಯ ಪುಣ್ಯತಿಥಿಯ ಅಂಗವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಾಡಿಕೊಂಡ ಮನವಿಯನ್ನು ನ್ಯಾಯಾಧೀಶರಾದ ಪಿ.ಡಿ.ಖೋಡೆ ಪುರಸ್ಕರಿಸಿದ್ದರು.
|