ಪಂಜಾಬ್ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಸಿಖ್‌ರ ಯಾದವೀಕಲಹ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಕಾರಣವಾಗಿರುವ ದೇರಾ ಮುಖ್ಯಸ್ಥರು ಕ್ಷಮೆಯಾಚಿಸಿದ್ದಾರೆ.
ತನ್ಮಧ್ಯೆ, ಪ್ರಸ್ತುತ ಉದ್ವಿಗ್ನತೆ ಅಶಾಂತಿಗೆ ಕಾರಣರಾದ ದೇರಾ ಸಭಾದ ಯಾವುದೇ ಸಂಸ್ಥೆಗಳು ರಾಜ್ಯದಲ್ಲಿ ಮುಂದುವರಿಯಬಾರದು ಎಂದು ಸಿಖ್ ಸಮುದಾಯ ಪ್ರಮುಖ ಸಂಘಟನೆ ಅಕಾಲ್ ತಕ್ತ್, ಈ ವಿಭಾಗದ ಎಲ್ಲಾ ಸಂಸ್ಥೆಗಳನ್ನು ಮುಚ್ಚಲು ಭಾನುವಾರದ ವರೆಗೆ ಗಡುವು ನೀಡಿತ್ತು.
ಪ್ರಸ್ತುತ ಗಡುವು ಮುಗಿಯುತ್ತಿರುವಂತೆಯೇ ದೇರಾ ಸಚ್ಚಾ ಸಭಾದ ಮುಖ್ಯಸ್ಥ ಗಮೀಟ್ ರಾಮ್ ರಪೀಂ ಸಿಂಗ್ ಕ್ಷಮೆಯಾಚಿಸಿದ್ದಾರೆ. ಜಾಹೀರಾತಿನಲ್ಲಿ ಸಿಖ್ ಗುರುವನ್ನು ಹೋಲಿಸಿ ಪ್ರಕಟಣೆ ಬಂದಿತ್ತು. ತಮಗೆ ಸಿಖ್ ಗುರುಗಳ ಬಗ್ಗೆ ಗೌರವ ವಿದೆ , ಅಗೌರವ ಇಲ್ಲ ಎಂದವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಶಾಂತಿ ಹೊಗೆಯಾಡುತ್ತಿರುವಂತೆಯೇ, ದೇರಾ ಸಂಸ್ಥೆಗಳನ್ನು ಮುಚ್ಚಲು ಸಿಖ್‌ಸಂಘಟನೆಗಳು ನೀಡಿದ ಗಡುವು ಮುಕ್ತಾಯವಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ಅಂಗವಾಗಿ ಪಂಜಾಬ್ ಪೊಲೀಸರು ದೇರಾ ಸಚ್ಚಾ ಮುಖಂಡರಲ್ಲಿರುವ ಅಧಿಕೃತ ಅಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
|