ಪಕ್ಷದ ಶಿಸ್ತುಪಾಲಿಸದ ಕೇರಳದ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಪಿಣರಾಯ್ ವಿಜಯನ್‌ರನ್ನು ಸಿಪಿಐಎಂ ಪೋಲಿಟ್ ಬ್ಯೂರೋ ಅಮಾನತು ಮಾಡಿದೆ: ನಾವು ಮಾಡಿದ ತಪ್ಪಿಗೆ ಶಿಕ್ಷೆ ಎಂದು ಅಚ್ಯುತಾನಂದನ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಪೋಲಿಟ್ ಬ್ಯುರೋದ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು, ಸಾರ್ವಜನಿಕ ನೆಲೆಯಲ್ಲಿ ಇಬ್ಬರೂ ಪಕ್ಷದ ಸಿದ್ದಾಂತಗಳನ್ನು ಹಾಳುಗೆಡವವಿದ ಪರಿಣಾಮವಾಗಿ ಅಮಾನತುಗೊಳಿಸಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಮತ್ತು ವಿಜಯನ್ ಇಬ್ಬರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಪೋಲಿಟ್ ಬ್ಯುರೋದಿಂದ ಅಮಾನತುಗೊಳಿಸಿರುವುದಾಗಿ ಕಾರಟ್ ತಿಳಿಸಿದರು.
ಆದರೆ ಅವರಿಬ್ಬರು ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.ಪಕ್ಷಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವಂತಿಲ್ಲ ಎಂದು ಅವರು ಹೇಳಿದರು.
ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇರಳದ ಸಿಪಿಐಎಂ ಹಿರಿಯ ಮುಖಂಡರು,ಪಕ್ಷದ ಪ್ರಮುಖರು ಹಾಜರಿದ್ದರು.ಈ ನಿರ್ಣವನ್ನು ಕೇಂದ್ರ ಸಮಿತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
|