ದೆಹಲಿ ಉಚ್ಛನ್ಯಾಯಾಲಯ ಸೋಮವಾರದಂದು ಮಾಜಿ ಕೇಂದ್ರ ಸಚಿವ ಶಿಬು ಸೋರೇನ್ ಮನವಿಯ ವಿಚಾರಣೆ ನಡೆಸಲಿದೆ. ಆಪ್ತ ಕಾರ್ಯದರ್ಶಿ ಶಶಿನಾಥ್ ಜಾ ಹತ್ಯೆ ಪ್ರಕರಣ ಇದಾಗಿದೆ.
ಕಳೆದ ವರ್ಷ ಡಿಸೆಂಬರ್ 26 ರಂದು ದೆಹಲಿ ನಗರ ನ್ಯಾಯಾಲಯ ತನ್ನ ಆಪ್ತ ಕಾರ್ಯದರ್ಶಿ ಶಶಿನಾಥ್ ಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋರೇನ್ ಸೇರಿದಂತೆ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆದರೆ ವಿಚಾರಣಾಧೀನ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸೋರೇನ್ ಮರು ವಿಚಾರಣೆಗಾಗಿ ದೆಹಲಿ ಉಚ್ಚನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ದೆಹಲಿ ನಗರ ನ್ಯಾಯಾಲಯದ ನ್ಯಾಯಾಧೀಶರು ಎರಡು ಡಿಎನ್‍ಎ ವರದಿಯನ್ನು ಗುರುತಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸೋರೇನ್ ಆರೋಪಿಸಿದ್ದಾರೆ.
ದೆಹಲಿಯ ದೌಲಾ ಕುವಾನ್ ಪ್ರದೇಶದಿಂದ 1992 ಮೇ 22 ರಂದು ಕಾಣೆಯಾದ ಶಶಿನಾಥ್ ಜಾ,ನಂತರ ಸೋರೇನ್ ರಾಂಚಿ ಕಂಪೆನಿ ಸಮೀಪ ಅವರನ್ನು ಕೂಡಿ ಹಾಕಲಾಗಿತ್ತು.
1993ರ ಲೋಕಸಭಾ ಚುನಾವಣೆ ನಂತರ ಪಿವಿ ನರಸಿಂಹ ರಾವ್ ಸರಕಾರಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸೋರೇನ್ ಸೇರಿದಂತೆ ಜೆಎಂಎಂ ಸಂಸದರು ಪಡೆದ ಲಂಚದ ವಿಷಯ ಜಾ ನೋಡಿದ್ದು, ಆ ನಂತದರಲ್ಲಿ ಈ ವಿಷಯದಲ್ಲೇ ಜಾನನ್ನು ಕೊಲ್ಲಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾ ತಾಯಿ ಪ್ರಿಯಂವದಾ ಹಾಗೂ ಪುತ್ರಿಯರಾದ ಕವಿತಾ ಮತ್ತು ಪ್ರೀತಿ ಸೋರೇನ್‍ಗೆ ನ್ಯಾಯಾಲಯ ನೀಡಿದ ಜೀವಾವಧಿಯ ಶಿಕ್ಷೆಯ ಬದಲು ಮರಣ ದಂಡನೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಅಲ್ಲದೇ ತಮ್ಮ ಕುಟುಂಬಕ್ಕೆ ಐದರಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕೋರಿದ್ದರು.
|