ಪಾತಕ ಲೋಕದ ರಾಜಧಾನಿಯಂತಿದ್ದ ಮುಂಬೈ ಇತ್ತೀಚೆಗೆ ಶಾಂತವಾಗಿದ್ದರೂ, ಇದೀಗ ಮತ್ತೆ ರಿವಾಲ್ವರ್ ಹೊಗೆಯುಗುಳಿದೆ ಗುಂಡು ತಗುಲಿ ಮಂಗಳೂರಿನ ವ್ಯಕ್ತಿಯೋರ್ವ ಮೃತಪಟ್ಟ ಕೃತ್ಯ ಸಂಭವಿಸಿದೆ.
ಬಾಂದ್ರಾ ದಲ್ಲಿರುವ ಬಾರ್ ಎಂಡ್ ರೆಸ್ಟೋರೆಂಟ್‌ವೊಂದರಲ್ಲಿ ಈ ಪಾತಕ ಕೃತ್ಯ ಸಂಭವಿಸಿದ್ದು , ಮೃತನನ್ನು ಮಂಗಳೂರು ಮೂಲದ ಸುಖೇಶ ಶೆಟ್ಟಿ ಎಂದು ಗುರುತಿಸಲಾಗಿದೆ. ಬಾರ್‍ಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿದ್ದ ಸುಖೇಶ್ ಶೆಟ್ಟಿ ಮತ್ತು ಸಂಗಡಿರತ್ತ ಗುಂಡು ಹಾರಿಸಿದಾಗ ಸುಖೇಶ್ ಸ್ಧಳದಲ್ಲೇ ಸಾವನ್ನಪ್ಪಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಸುಖೇಶ್‌ರ ಸಂಗಡವಿದ್ದ ಇತರ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಾಂದ್ರಾದ ಆಸ್ಪತ್ರೆಗೆ ದಾಖಲಿಸಲಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಸುಖೇಶ್ ಶೆಟ್ಟಿ ಮುಂಬೈ ಭೂಗತ ಜಗತ್ತಿನಲ್ಲಿ ನಡೆಯುತ್ತಿರುವ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿ ಪೊಲೀಸರಿಗೆ ನೀಡುತ್ತಿದ್ದ. ಕೃತ್ಯಕ್ಕೆ ಇದುವೇ ಕಾರಣವಿರಬಹುದೆಂದು ಅಂದಾಜಿಸಲಾಗಿದೆ.
|