ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಜಸ್ತಾನ- ಎರಡು ಠಾಣೆಗಳಿಗೆ ಬೆಂಕಿ, ಕಟ್ಟೆಚ್ಚರ
webdunia
Violence
PTI
ರಾಜಸ್ತಾನ ರಾಜ್ಯದಲ್ಲಿ ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ಮಂಗಳವಾರಸಂಭವಿಸಿದ ಹೊಯ್‌ಕೈ ಗೋಲೀಬಾರ್‌ ಪ್ರಕರಣ 13 ಮಂದಿಯನ್ನು ಬಲಿ ತೆಗೆದು ಕೊಂಡ ಬೆನ್ನಲ್ಲೇ ಇಂದು ಆಕ್ರೋಶಗೊಂಡ ಜನರು ಎರಡು ಫೊಲೀಸ್‌ ಠಾಣೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ.

ಪ್ರಕರಣದಲ್ಲಿ ಈ ವರೆಗೆ ಇಬ್ಬರು ಪೊಲೀಸರು ಕಾಣೆಯಾಗಿದ್ದಾರೆ. ಇವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಬಂದಿವೆಯಾದರೂ ಇನ್ನೂ ದೃಢೀಕರಿಸಿಲ್ಲ.

ಈ ಮಧ್ಯೆ ದೋಸಾ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ಉಲ್ಬಣಿಸಿದೆ, ಇನ್ನಿತರ ಬುಂದಿ ಹಾಗೂ ನಿಕಟ ಪ್ರದೇಶಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಆಗ್ರಾ-ಜೈಪುರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದಾಗಿ ಸ್ಥಳೀಯ ಮಾಹಿತಿ ಲಭಿಸಿದೆ.

ಲಭ್ಯ ಮಾಹಿತಿಯಂತೆ , ರಾಜಸ್ತಾನದ ಜೈಪುರ್- ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ದೋಸಾ ಜಿಲ್ಲೆಯ ಪಿಪಲ್‌ಖೇರಾ ಗ್ರಾಮದ ಬಳಿ ಪ್ರಸ್ತುತ ಪ್ರಕರಣ ಸಂಭವಿಸಿತ್ತು.ಸುಮಾರು 20 ಸಾವಿರ ಮಂದಿ ಗುರ್ಜಾರ ಜನಾಂಗಕ್ಕೆ ಸೇರಿದ ದಲಿತರು ಜಮಾಯಿಸಿ ಪರಿಶಿಷ್ಟಜಾತಿ ಮೀಸಲಾತಿ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಹಿಂಸಾಚಾರ ನಡೆದಿತ್ತು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು,ಹಲವಾರು ಮಂದಿ ಗಾಯಗೊಂಡಿದ್ದರು. ಕಾಣೆಯಾಗಿರುವ ಪೊಲೀಸ್‌ ಸಿಬ್ಬಂದಿಗಳ ಮಾಹತಿಗಾಗಿ ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ.
ಮತ್ತಷ್ಟು
ಪ್ರತಿಭಟನಾಕಾರರ ಮೇಲೆ ಪೊಲೀಸ್‌ ಗುಂಡು - 6 ಬಲಿ
ಮುಂಬೈ ಶೂಟ್‌: ಮಂಗಳೂರಿನ ವ್ಯಕ್ತಿ ಸಾವು
ಇಂದು ಶಿಬು ಸೋರೇನ್ ಮನವಿ ವಿಚಾರಣೆ
ಅಮಾನತು ತಪ್ಪಿಗೆ ಶಿಕ್ಷೆ-ಅಚ್ಚುತಾನಂದನ್
ಕರಾವಳಿಯ ಪ್ರವಾಸೋದ್ಯಮಕ್ಕೆ ಆದ್ಯತೆ
ಪಂಜಾಬ್‌- ಕ್ಷಮೆ, ಗಡುವು ಮುಕ್ತಾಯ