ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಪ್ರಧಾನಿ ಸಿಂಗ್ ಜೊತೆ ಎಸ್‌ಜಿಪಿಸಿ ಭೇಟಿ ಸಿದ್ಧತೆ
webdunia
Prime minister
PTI
ಪಂಜಾಬ್‌ ಗಲಭೆಗಳು ಎರಡು ಕೊಲೆ ಕೃತಯ ಸಂಬಂಧಿಸಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ವಿರುದ್ಧ ಪ್ರಗತಿಯಲ್ಲಿರುವ ಸಿಬಿಐ ತನಿಖೆಯನ್ನು ತ್ವರಿತಗೊಳಿಸುವಂತೆ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ (ಎಸ್‌ಜಿಪಿಸಿ)ಯ 51 ಸದಸ್ಯರ ಮಂಡಳಿಯು ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲಿದೆ.

ಅತ್ತ ಸಿಖ್‌ರ ಅತ್ಯುನ್ನತ ಪೀಠವಾದ ಅಕಾಲ್ ತಕ್ತ ಡೇರಾ ಸಚ್ಚಾ ಸೌದಾದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದೆ ಹಾಗೂ ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸುವಂತೆ ಅಮೃತಸರ್‌ದಲ್ಲಿ ಎಲ್ಲ ಧಾರ್ಮಿಕ ಮುಖಂಡರು ಮಾತುಕತೆ ನಡೆಸಿದ್ದು ಬುಧವಾರ ಐತಿಹಾಸಿಕ ನಿರ್ಣಯ ಪ್ರಕಟಿಸಲಿದ್ದೇವೆ ಎಂದು ಸಭೆಯು ತಿಳಿಸಿದೆ.

ಆದರೆ, ಸಿಖ್ ಸಮುದಾಯ ಹಾಗೂ ಡೇರಾ ಸಚ್ಚಾ ಸೌದಾ ಪಂಗಡಗಳ ನಡುವೆ ಉಲ್ಬಣಿಸಿರುವ ಧಾರ್ಮಿಕ ಬಿಕ್ಕಟ್ಟಿಗೆ ಸೌಹಾರ್ದಯುತವಾಗಿ ಬಗೆಹರಿಸಲು ಸರ್ವಧರ್ಮ ಸಂಸದವು ಮುಂದಾಗಿದೆ.

ಅಮೃತಸರ್‌ದ ಸ್ವರ್ಣ ಮಂದಿರದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಧಾರ್ಮಿಕ ಸಭೆಯಲ್ಲಿ ಐದು ಅತ್ಯುನ್ನತ ಅಕಾಲ್ ತಕ್ತ್‌ಗಳು ಭಾಗವಹಿಸಿದ್ದವು.
ಮತ್ತಷ್ಟು
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ
ರಾಜಸ್ತಾನ- ಎರಡು ಠಾಣೆಗಳಿಗೆ ಬೆಂಕಿ, ಕಟ್ಟೆಚ್ಚರ
ಪ್ರತಿಭಟನಾಕಾರರ ಮೇಲೆ ಪೊಲೀಸ್‌ ಗುಂಡು - 6 ಬಲಿ
ಮುಂಬೈ ಶೂಟ್‌: ಮಂಗಳೂರಿನ ವ್ಯಕ್ತಿ ಸಾವು
ಇಂದು ಶಿಬು ಸೋರೇನ್ ಮನವಿ ವಿಚಾರಣೆ