ಮರಾಠಿ ಹಾಗೂ ಹಿಂದಿಯ ಹಿರಿಯ ನಟಿ ರಾಷ್ಟ್ರಪತಿ ಪದಕ ಪುರಸ್ಕೃತ ಕಲಾವಿದೆ ವನಮಾಲಾ ಪವಾರ್ ಅವರು ಬುಧವಾರ ನಿಧನರಾಗಿದ್ದಾರೆ.
ಗ್ವಾಲಿಯರ್‍ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಅವರು ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಇವರೇ ನಿರ್ಮಿಸಿದ ಹಾಗೂ ನಟಿಸಿದ ಮರಾಠಿ ಚಿತ್ರ 'ಶ್ಯಾಮ್ ಚಿ ಆಯಿ' ಚಿತ್ರಕ್ಕೆ 1953 ರಲ್ಲಿ ರಾಷ್ಟ್ರಪತಿ ಪದಕವನ್ನು ಪಡೆದುಕೊಂಡಿದ್ದರು.
ಮೇ 22, 1915 ರಂದು ಜನಿಸಿದ ಸುಶೀಲಾ ದೇವಿ ಅವರು, 1941 ರಲ್ಲಿ ಬೆಳ್ಳಿತೆರೆಗೆ ಕಾಲಿಟ್ಟ ನಂತರ ವನಮಾಲಾ ಪವಾರ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಹಿಂದಿ ಹಾಗೂ ಮರಾಠಿಯಲ್ಲಿ ಇದುವರೆಗೂ ಅವರು ಸುಮಾರು 32 ಕ್ಕಿಂತಲೂ ಅಧಿಕ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
|