ಪಾಕಿಸ್ಥಾನದಲ್ಲಿ ಜರುಗಲಿರುವ ಸಿಖ್‌ರ ಐದನೇ ಗುರು ಅರ್ಜುನ್ ದೇವ್ ಅವರ 401ನೇ ಪುಣ್ಯತಿಥಿಯ ಅಂಗವಾಗಿ ಭಾರತದಿಂದ ಸಾವಿರಕ್ಕೂ ಅಧಿಕ ಸಿಖ್ ಭಕ್ತರು ತೆರಳುವರು.
ಸುದ್ದಿ ಸಂಸ್ಥೆಗಳು ವರದಿ ಮಾಡಿರುವಂತೆ ಗುರು ಅರ್ಜುನ್ ದೇವ್ ಅವರ ಪುಣ್ಯತಿಥಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜೂನ್ 8 ರಂದು ಭಾರತದಿಂದ ವಿಶೇಷ ರೈಲಿನ ಮೂಲಕ ಒಂದು ಸಾವಿರಕ್ಕೂ ಅಧಿಕ ಸಿಖ್ ಭಕ್ತರು ಪಾಕ್ ಲಾಹೋರ್‌ಗೆ ಭೇಟಿ ನೀಡಲಿದ್ದಾರೆ.
ಗುರು ನಾನಕ್ ಅವರ ಹುಟ್ಟು ಸ್ಥಳವಾದ ನಂಕಾನಾ ಸಾಹೀಬ್ ಮತ್ತು ಪುಂಜಾ ಸಾಹೀಬ್‌ಗೆ ಭಕ್ತರು ಭೇಟಿ ನೀಡಲಿದ್ದು, ಅಲ್ಲಿಂದ ಲಾಹೋರ್‌ಗೆ ಮರಳಲಿದ್ದು, ಜೂನ್ 16 ರಂದು ನಡೆಯಲಿರುವ ಗುರದ್ವಾರ ಡೇರಾ ಸಾಹಿಬ್ ಅವರ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.
ದೇಶಕ್ಕೆ ಸಿಖ್ ಧರ್ಮಿಯರು ಭೇಟಿ ನೀಡಿದ ಸಂದರ್ಭದಲ್ಲಿ ಸಕಲ ವ್ಯವಸ್ಥೆ ಮಾಡುವುದಾಗಿ ಪಾಕಿಸ್ತಾನ ತಿಳಿಸಿದ್ದು, ಇದರಿಂದ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ.
ವಾಘಾ ಗಡಿಯ ಮೂಲಕ ವಲಸೆ ಬರುವವರ ಸಂಖ್ಯೆಯನ್ನು ಹೆಚ್ಚಿಸಲು ಪಾಕ್ ಧಾರ್ಮಿಕ ವ್ಯವಹಾರ ಸಚಿವ ಇಜಾಜ್ ಉಲ್ ಹಕ್ ವಚನ ನೀಡಿದ್ದಾರೆ. ಸಿಖ್ ಭಕ್ತರು ವಾಘಾ ಗಡಿಯ ಮೂಲಕ ಆದಷ್ಟು ಬೇಗನೆ ಬರಲು ಏಕಮಾರ್ಗವನ್ನು ರೂಪಿಸಲಾಗುವುದು ಎಂದು ಹಕ್ ಹೇಳಿದ್ದಾರೆ.
|