ಗುರ್ಜರ ಜನಾಂಗದ ಪ್ರತಿಭಟನೆಯಲ್ಲಾದ ಗೋಲಿಬಾರ್ ಘರ್ಷಣೆ ಮತ್ತು ಸಾವುನೋವುಗಳ ಪ್ರತಿಫಲನ ಇದೀಗ ಸಮಗ್ರ ರಾಜಸ್ತಾನ ರಾಜ್ಯವನ್ನು ವ್ಯಾಪಿಸತೊಡಗಿದೆ. ಸರ್ಕಾರದ ಸಾಂತ್ವನ ಕ್ರಮಗಳು ವಿಫಲವಾಗಿವೆ,ಆಯಕಟ್ಟಿನ ಜಾಗಗಳಲ್ಲಿ ಸೇನೆ ತುಕಡಿಗಳನ್ನು ನಿಯೋಜಿಸಲಾಗಿದೆ
ಮಂಗಳವಾರ ಬೆಳಗಿನಿಂದೀಚೆಗೆ ರಾಜಸ್ತಾನದಲ್ಲಿ ಗುರ್ಜರ ಜನಾಂಗ ಪ್ರಕರಣ ಉದ್ವಿಗ್ನಸ್ಥಿತಿಯಲ್ಲಿ ಮಂದುವರಿದಿದ್ದು, 13 ಮಂದಿ ಕಾಣೆಯಾಗಿದ್ದಾರೆ,ಪೊಲೀಸ್ ಗೋಲಿಬಾರ್ , ಘರ್ಷಣೆ ಆ ಬಳಿಕದ ದೊಂಬಿ ಕೊಳ್ಳಿಯಿಡುವ ಪ್ರಕರಣದಲ್ಲಿ ಅಪಾರ ಸೊತ್ತು ನಾಶವಾಗಿರುವಂತೆಯೇ, 2 ಪೊಲೀಸ್ ಠಾಣೆಗಳು ಧ್ವಂಸವಾಗಿ 2 ಮಂದಿ ಪೊಲೀಸ್ ಸಿಬ್ಬಂದಿ ನಾಪತ್ತೆಯಾಗಿದ್ದರು.
ಜನರು ಇನ್ನೂ ಉದ್ರಿಕ್ತರಾಗಿದ್ದು ಪ್ರದೇಶ ಉದ್ವಿಗ್ನ ಸ್ಥಿಯಲ್ಲೇ ಮುಂದುವರಿದಿದೆ. ಘರ್ಷಣೆಯಲ್ಲಿ ನಿರತರಾಗಿರುವ ಜನರು ಕಳೆದ ರಾತ್ರಿ ಗ್ಯಾಸ್ ಸಿಲಿಂಡರ್ ತುಂಬಿ ಸಾಗುತ್ತಿದ್ದ ಟ್ರಕ್ ಕಾಟ್‌ಪುತಾಲಿ ಬಳಿ ತಡೆದು ಬೆಂಕಿ ಹಚ್ಚಿ ಧ್ವಂಸಗೈದಿದ್ದಾರೆ. ರಾಜ್ಯ ಸಾರಿಗೆಗೆ ಸೇರಿದ ನಾಲ್ಕಾರು ಬಸ್‌ಗಳನ್ನು ಭರತ್‌ಪುರ ಮತ್ತು ಸಾರಿಸ್ಕಾ ಬಳಿ ಬೆಂಕಿ ಹಾಕಿ ನಾಶಮಾಡಲಾಗಿದೆ.
ಹೊಸದಾಗಿ ವರದಿಯಾಗಿರುವ ಮಾಹಿತಿಯಂತೆ ಮುಖ್ಯಮಂತ್ರಿ ವಸುಂಧರಾ ರಾಜೆ ನೇತೃತ್ವದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರ್ಪಡಿಸ ಬೇಕೆಂಬ ಗುರ್ಜರ ಸಮುದಾಯದವರ ಒತ್ತಾಯಕ್ಕೆ ಸಾಂತ್ವನ ಹೇಳುವ ಮಾತುಕತೆಗಳು ವಿಫಲವಾಗಿವೆ.ಈ ಮಧ್ಯೆ ಹಿಂಸಾಚಾರ, ಆಸ್ತಿ ಹಾನಿ ,ಇತ್ಯಾದಿಗಳು ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ರಸ್ತೆತಡೆ ಪ್ರತಿಭಟನೆ ಇತ್ಯಾದಿಗಳ ರೂಪದಲ್ಲಿ ಭರತ್‌ಪುರ, ಬಂಡಿಕುಯಿ,ಕಾರೋಲಿ,ದೋಸಾ,ಧೋಲ್ಪುರ್,ಸವಾಯ್ ಮಾಧೋಪುರ್, ಜೈಪುರ್,ಬಿಲ್‌ವಾಲ,ಚಿಟ್ಟೋರ್ಗರ್, ಅಲ್ವಾರ್ ಪ್ರದೇಶಗಳಲ್ಲಿ ಸಂಭವಿಸಿವೆ.
|