ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
'ನೇತಾಜಿ ಕಡತ' ಅರ್ಜಿ ರದ್ದತಿಗೆ ಕೋರಿಕೆ
webdunia
ನೇತಾಜಿ ಸುಭಾಸ್‌ ಚಂದ್ರಬೋಸ್‌ ಅವರ ನಿಗೂಢ ಮರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಮೂರುದಶಕಗಳ ಹಿಂದೆ ಕೇಂದ್ರ ಸರ್ಕಾರ ನಾಶಮಾಡಿರುವುದನ್ನು ಪ್ರಶ್ನಿಸಿ ಕೇಂದ್ರೀಯ ಮಾಹಿತಿ ಆಯೋಗದ ಮುಂದಿರುವ ಅರ್ಜಿಯನ್ನು ರದ್ದು ಮಾಡಬೇಕೇಂದು ಪ್ರಧಾನಮಂತ್ರಿ ಕಾರ್ಯಾಲಯ(ಪಿಎಂಓ) ಕೋರಿದೆ.

ಸ್ವಾತಂತ್ರ್ಯ ಸಂಗ್ರಾಮದ ಸಿಡಿಲಕಿಡಿ ಐಎನ್‌ಎ ಸ್ಥಾಪಕರಾದ ನೇತಾಜಿ 'ನಿಗೂಢರೀತಿಯಲ್ಲಿ ಇಹಲೋಕ ತ್ಯಜಿಸಿ'ರುವುದಾಗಿ ಚರಿತ್ರೆ ದಾಖಲಿಸಿದೆ. ಈ ಕುರಿತು ಸರ್ಕಾರ ತನಿಖೆ ನಡೆಸಿತ್ತು. ತನಿಖೆಯ ವರದಿ ಸರ್ಕಾರದ ಮುಂದಿತ್ತು. ಈ ವರದಿಯನ್ನು 1972ರಲ್ಲಿ ಅಂದಿನ ಕೇಂದ್ರ ಸರ್ಕಾರ ನಾಶಮಾಡಿತ್ತು.

ನೇತಾಜಿ ಅಪ್ರತ್ಯಕಷರಾದ ಕುರಿತು ಇತಿಹಾಸದಲ್ಲಿ ಮಹತ್ವವಿರುವ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ನಾಶಮಾಡಿರುವುದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ದೆಹಲಿ ಮೂಲದ ಸರ್ಕಾರೇತರ 'ಮಿಷನ್‌ ನೇತಾಜಿ'ಸಂಘಟನೆಯ ಸಂಚಾಲಕ ಅನೂಜ್‌ ಧರ್‌ ಕೇಂದ್ರಿಯ ಮಾಹಿತಿ ಆಯೋಗ(ಸೆಂಟ್ರಲ್‌ ಇನ್ಫರ್ಮೇಷನ್‌ ಕಮಿಷನ್‌-ಸಿಐಸಿ)ದ ಮುಂದೆ ದೂರು ದಾಖಲಿಸಿದ್ದರು.

ಮಿಷನ್‌ ನೇತಾಜಿ ಸಂಘನೆಯ ದೂರಿನಂತೆ ಸಿಐಸಿ ಕೇಂದ್ರ ಸರ್ಕಾರಕ್ಕೆ ಕಾರಣಕೇಳಿ ನೋಟೀಸ್‌ ನೀಡಿತ್ತು. ಇದೀಗ ನೋಟೀಸಿಗೆ ಉತ್ತರಿಸಿರುವ ಸರ್ಕಾರ ಸರ್ಕಾರಿ ಕಡತವನ್ನು ನಾಶಮಾಡಿರುವ ಆಂತರಿಕ ವಿಷಯವನ್ನು ಪ್ರಶ್ಸಿರುವ ಖಾಸಗಿ ಸಂಘಟನೆಯ ವಿಧಾನವನ್ನು ತೀವ್ರವಾಗಿ ವಿರೋಧಿಸಿದೆ.
ಮತ್ತಷ್ಟು
ಗುರ್ಜರರ ತಣಿಯದ ಆಕ್ರೋಶ-ಸೇನೆ ನಿಯುಕ್ತಿ
ಗುರುಪುಣ್ಯತಿಥಿ-ಪಾಕ್‌ಗೆ ಬಾರತೀಯ ಸಿಖ್‌ರು
ಸಿನಿ ತಾರೆ ವನಮಾಲಾ ನಿಧನ
ಪ್ರಧಾನಿ ಸಿಂಗ್ ಜೊತೆ ಎಸ್‌ಜಿಪಿಸಿ ಭೇಟಿ ಸಿದ್ಧತೆ
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ