ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಬಿಎಸ್‌ಎನ್‌ಎಲ್‌ ರೋಮಿಂಗ್‌ ಕಡಿತ, ಕಾಲ್‌ಕಾರ್ಡ್‌ ಜಾರಿ
webdunia
PHONE
PTI
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್ಎಲ್ ಹಾಗೂ ಎಂಟಿಎನ್‌ಎಲ್‌ಗಳು ರಾಜ್ಯಾಂತರ ಕರೆ(ರೋಮಿಂಗ್‌)ಗಳಿಗೆ ಶುಲ್ಕವನ್ನು ಕಡಿತಗೊಳಿಸಿವೆ. ಇದು ಜೂನ್3ರಿಂದ ಜಾರಿಗೊಳ್ಳಲಿದೆ.

ಭಾರತೀಯ ದೂರವಾಣಿ ಸಂಸ್ಥೆ (ಬಿಎಸ್‌ಎನ್‌ಎಲ್‌ ) ಹಾಗೂ ಅಧೀನ ಸಂಸ್ಥೆಯಾಗಿರುವ ಮಹಾನಗರ ದೂರವಾಣಿ ಸಂಸ್ಥೆ ( ಎಂಟಿ ಎನ್‌ಎಲ್‌)ಗಳ ಬಳಕೆದಾರರಿಗೆ ಇದು ಖುಷಿಯ ವಿಷಯ. ಯಾವುದೇ ಮೊಬೈಲ್‌ ಸಂಪರ್ಕದ ಫೋನ್‌ನಿಂದ ಮೊಬೈಲ್‌ಗೆ ಬರುವ ( ಇನ್‌ಕಮಿಂಗ್‌)ಕರೆಗಳಿಗೆ 1 ರೂ. ಹಾಗೂ ಹೊರ ಹೋಗುವ(ಔಟ್‌ಗೋಯಿಂಗ್‌)ಕರೆಗಳಿಗೆ 40ಪೈಸೆ ನಿಗದಿ ಪಡಿಸಲಾಗಿದೆ.

ಮಾಸಿಕ ಬಾಡಿಗೆ ಯೋಜನೆಯು 55 ರೂ.ಗಳಿಗೆ ಸ್ಥಿರಗೊಳಿಸಲಾಗಿದೆ. ಇದರಂತೆ ಚಂದಾದಾರರು 300 ನಿಮಿಷಗಳ ಉಚಿತ ಒಳಬರುವ ಕರೆಗಳಿಗೆ ಮಾತನಾಡುವ ಅವಕಾಶವನ್ನು ಹೊಂದುವರು ಎಂದು ಬಿಎಸ್‌ಎನ್‌ಎಲ್‌ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಸಿನ್ಹಾ ತಿಳಿಸಿದ್ದಾರೆ. ಹೊಸ ಯೋಜನೆಯಿಂದ ಬಿಎಸ್‌ಎನ್‌ಎಲ್‌ ಮತ್ತು ಎಂಟಿ ಎನ್‌ಎಲ್‌ ವ್ಯವಹಾರ 25 ಶೇಕಡ ಹೆಚ್ಚುವ ನಿರೀಕ್ಷೆ ಇರಿಸಲಾಗಿದೆ.

ಕರೆಕಾರ್ಡು: ಇದೇ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌ ನೂತನ ಕರೆ ಕಾರ್ಡ್‌ ( ಕಾಲ್‌ ನೌ)ಗಳನ್ನು ಜಾರಿಗೊಳಿಸಿದೆ. ಇದು ವಿದೇಶಿ ಕರೆಗಳಿಗಾಗಿ ಇರಿಸಲಾಗಿದೆ. ಅಮೆರಿಕ ಮತ್ತು ಕೆನಡಾಗಳಿಗೆ ನಿಮಿಷಕ್ಕೆ ತಲಾ 1.75 ರೂ., ಕೊಲ್ಲಿ ರಾಷ್ಟ್ರಗಳಿಗೆ ನಿಮಿಷಕ್ಕೆ 6.75 ರೂ. ಶುಲ್ಕ ತಗಲುವುದು. ಈ ಕಾರ್ಡಿಗೆ 2000 ರೂ. ಪಾವತಿಸಬೇಕಾಗುವುದು. ಇದರೊಂದಿಗೆ ಇಷ್ಟೇ ಮೊತ್ತದ ಟಾಕ್‌ಟೈಂ ಉಚಿತ ಕೊಡುಗೆಯೂ ಇದೆ.
ಮತ್ತಷ್ಟು
ರಾಜಸ್ತಾನ-ಕೇಂದ್ರ ಸಭೆ, ಸರ್ವಪಕ್ಷ ಸಭೆ
'ನೇತಾಜಿ ಕಡತ' ಅರ್ಜಿ ರದ್ದತಿಗೆ ಕೋರಿಕೆ
ಗುರ್ಜರರ ತಣಿಯದ ಆಕ್ರೋಶ-ಸೇನೆ ನಿಯುಕ್ತಿ
ಗುರುಪುಣ್ಯತಿಥಿ-ಪಾಕ್‌ಗೆ ಬಾರತೀಯ ಸಿಖ್‌ರು
ಸಿನಿ ತಾರೆ ವನಮಾಲಾ ನಿಧನ
ಪ್ರಧಾನಿ ಸಿಂಗ್ ಜೊತೆ ಎಸ್‌ಜಿಪಿಸಿ ಭೇಟಿ ಸಿದ್ಧತೆ